

ವಿಜಯವಾಣಿ ಸುದ್ದಿಜಾಲ ನಂದಗುಡಿ
ದೇವಸ್ಥಾನದಲ್ಲಿ ಕೈಗೊಳ್ಳುವ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುವುದರಿಂದ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬಹುದು ಎಂದು ವಹ್ನಿಕುಲದ ಮುಖಂಡ ಓಮೇಶ್ ಹೇಳಿದರು.
ಹೋಬಳಿಯ ಬನಹಳ್ಳಿಯಲ್ಲಿ ಶ್ರೀ ದ್ರೌಪದಾಂಬದೇವಿ 17ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದರು.
ಮನುಷ್ಯನಲ್ಲಿ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರ ದೇವಾಲಯ. ನೆಮ್ಮದಿ, ಸುಖ, ಶಾಂತಿ ಪಡೆಯಲು ಎ್ಲರೂ ದೇವರ ಮೊರೆ ಹೋಗಬೇಕು ಎಂದರು.
ವಹ್ನಿಕುಲ ಯಾಜಮಾನ್ ಮುನಿಯಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಹ್ನಿಕುಲ ಜನಾಂಗ ಹಾಗೂ ಎಲ್ಲ ಸಮುದಾಯದವರು ಒಟ್ಟಾಗಿ ದೇವಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಿದ್ದು, ಇಂತಹ ಕಾರ್ಯಗಳಿಂದ ಗ್ರಾಮದಲ್ಲಿ ಸೌಹಾರ್ದತೆ ನೆಲೆಸುತ್ತದೆ ಎಂದರು.
ಬನಹಳ್ಳಿ ಹಾಗೂ ಹಿಂಡಿಗನಾಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಪಂ ಮಾಜಿ ಉಪಾಧ್ಯಕ್ಷೆ ಗಾಯತ್ರಿ ನಾಗೇಶ್, ಸದಸ್ಯ ಜಯರಾಮಯ್ಯ, ಮಾಜಿ ಉಪಾಧ್ಯಕ್ಷೆ ಪ್ರೇಮಾ ಹರೀಶ್, ಮಾಜಿ ಸದಸ್ಯರಾದ ನಾಗೇಶ್, ಕೋಮಲಾ ಕೃಷ್ಣಮೂರ್ತಿ ಮತ್ತಿತರರಿದ್ದರು.