ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

enveirnament day
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ನೈಸರ್ಗಿಕ ಪರಿಸರ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ಹೊಣೆ ಹೊರುವ ಜತೆಗೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಅಗ್ಸ್ನೋಬಲ್ ಕಂಪನಿ ಪ್ರೊಡಕ್ಷನ್ ಮ್ಯಾನೇಜರ್ ಜೋಯಿಸ್ ಹೇಳಿದರು.
ಹೋಬಳಿಯ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅಗ್ಸ್ನೋಬಲ್ ಕಂಪನಿ ಹಾಗೂ ಅಪ್ಸಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದರು.
ಮಾನವರು ಆರೋಗ್ಯದಿಂದ ಇರಬೇಕಾದರೆ ಶುದ್ಧ ಗಾಳಿ, ನೀರು, ಆಹಾರ ಸಿಗುವಂತಾಗಬೇಕು. ಗಿಡ, ಮರ, ಪಕ್ಷಿ ಮತ್ತು ಪ್ರಾಣಿ ಸಂಕುಲ ಸಮತೋಲನ ಕಾಪಾಡುವ ಜವಾಬ್ದಾರಿಯೂ ನಮ್ಮದಾಗಬೇಕು. ಆರೋಗ್ಯಕರ ಪರಿಸರದಿಂದ ಸಮಾಜಕ್ಕೆ ಉತ್ತಮ ಅಡಿಪಾಯವಾಗಲಿದೆ ಎಂದರು.
ವೈದ್ಯೆ ಡಾ.ಶಿವರಂಜನಿ ಮಾತನಾಡಿ, ಮಾನವನ ಸ್ವಾರ್ಥದಿಂದ ಪರಿಸರ ಕಾಳಜಿ ಹಾಳಾಗುತ್ತಿದೆ. ದಿನೇದಿನೆ ಭೂಮಿ ತಾಪಮಾನ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಗಿಡ ನೆಡುವ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್ ಬಳಕೆ, ಮರಗಳ ನಾಶ, ನೀರಿನ ದುರ್ಬಳಕೆ ನಿಲ್ಲಬೇಕು. ಭೂಮಿ ಬರಡಾಗುವ ಮೊದಲೇ ನಾವೆಲ್ಲರೂ ನೈಸರ್ಗಿಕ ಸಂಪತ್ತು ರಕ್ಷಿಸೋಣ ಎಂದು ಕರೆ ನೀಡಿದರು.
ಅಗ್ಸ್ನೋಬಲ್ ಕಂಪನಿ ವ್ಯವಸ್ಥಾಪಕ ಜೀವನ್, ಸಿಬ್ಬಂದಿ ಐಶ್ವರ್ಯ, ಸಾಗರ್, ಮುಖ್ಯಶಿಕ್ಷಕ ಕೃಷ್ಣ ಕುಮಾರ್, ಶಿಕ್ಷಕರಾದ ವಿಜಯಕುಮಾರ್, ಜ್ಯೋತಿ, ಕಮಲಾ, ವೀಣಾ, ಮಹಮ್ಮದ್ ನದೀಮ್‌ಪಾಷ, ಅಪ್ಸಾ ಸಂಸ್ಥೆಯ ಸಂಚಾಲಕ ದೇವರಾಜ್, ಭಾಗ್ಯಾ, ಸಂಪಾ, ತುಳಸಿಬಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net