

ಬೆಳ್ತಂಗಡಿ: ಕಳೆಂಜದ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಆಶ್ರಯದ ನಂದಗೋಕುಲ ಗೋಶಾಲೆಯಲ್ಲಿ ಪುಣ್ಯಕೋಟಿಗೆ ಒಂದು ಕೋಟಿ, ‘ಗೋಮಾತೆಗೆ ಕೋಟಿ ನಮನ’ ವಿಶಿಷ್ಟ ಕಾರ್ಯಕ್ರಮ ನಂದಗೋಕುಲ ದೀಪೋತ್ಸವ ಜುಲೈ 7ರಂದು ಸಂಜೆ 4ರಿಂದ ಗೋಶಾಲೆಯಲ್ಲಿ ನಡೆಯಲಿದೆ. ಮೇ 19ರಂದು ಗೋಮಾತೆಗೆ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಕಿರಣ್ ರಾವ್ ಮೊದಲಾದವರು ಭಾಗವಹಿಸಲಿದ್ದಾರೆ.