

ನರೇಗಲ್ಲ: ಗಾನಯೋಗಿ ಡಾ. ಪಂ. ಪುಟ್ಟರಾಜ ಗವಾಯಿಗಳು ನಾಡಿನ ಸಹಸ್ರಾರು ಅಂಧರು ಹಾಗೂ ಬಡ ಮಕ್ಕಳಿಗೆ ಸಂಗೀತ ಕಲಿಸುವ ಮೂಲಕ ಅವರ ಬದುಕಿಗೆ ನಂದಾದೀಪವಾಗಿದ್ದಾರೆ ಎಂದು ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಪಂ. ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವದಲ್ಲಿ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪುಟ್ಟರಾಜರು ಅಂಧರನ್ನು ಒಟ್ಟುಗೂಡಿಸಿ ಸಂಗೀತ ಶಾಲೆ ತೆರೆಯುವ ಮೂಲಕ ಅವರ ಬಾಳಿಗೆ ನೆರವಾಗಿದ್ದರು. ತಾವು ಒಬ್ಬ ಅಂಧರೆನ್ನುವುದನ್ನು ಮರೆತು ಅಂಧ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಬದುಕು ಕಟ್ಟಿಕೊಟ್ಟರು. ಪುಟ್ಟರಾಜರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಚನ ಸಂಗೀತ, ದಾಸವಾಣಿ, ಭಾವಗೀತೆ, ದೇಶಭಕ್ತಿಗೀತೆ, ತಬಲಾ ತರಬೇತಿ ನಿಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿದ್ದಾರೆ. ಅವರ ಸೇವೆ ಅವಿಸ್ಮರಣೀಯ ಎಂದರು.
ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ, ನಿವೃತ್ತ ಮುಖ್ಯಶಿಕ್ಷ ಎಂ.ಎಸ್ ಧಡೇಸೂರಮಠ ಮಾತನಾಡಿ, ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದಾರೆ ಎಂದರು.
ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮೀತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಎ.ಎ. ನವಲಗುಂದ, ದಾವೂದಲಿ ಕುದರಿ, ಶರಣಪ್ಪ ಕರಮುಡಿ, ಸಿರಾಜ್ ಹೊಸಮನಿ, ಶರಣಪ್ಪ ಉಪ್ಪಾರ, ಎಸ್.ಎ. ಬಸವರಡ್ಡೇರ, ಹೆಮಣ್ಣ ಹಡಗಲಿ, ರಾಜು ಆದ್ವಾನಿ, ನಾಗೇಶ ನವಲಗುಂದ, ಅಲ್ಲಾಭಕ್ಷ ನದಾಫ್, ಮಲ್ಲಿಕಾರ್ಜುನ ಮುಧೋಳ, ಶೇಖಪ್ಪ ಜುಟ್ಲ, ಬಸವರಾಜ ಹತ್ತಿಕಟಗಿ, ಸಂತೋಷ ಹನಮಸಾಗರ, ಪ್ರಶಾಂತ ಪುರಿ, ಇತರರಿದ್ದರು.