ನಾನಾಸಾಹೇಬ ಪೆನಲ್‌ಗೆ ಗೆಲವು

Published on

ಬೈಲಹೊಂಗಲ: ನೇಗಿನಹಾಳ ಪಿಕೆಪಿಎಸ್‌ಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಾನಾಸಾಹೇಬ ಪಾಟೀಲ ಅವರ ಪೆನಲ್ ಬಹುಮತದೊಂದಿಗೆ ಆಯ್ಕೆಯಾಗಿದೆ. ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ನಾನಾಸಾಹೇಬ ಪಾಟೀಲ, ಬಸವರಾಜ ದಿವಾಣದ, ಮಡಿವಾಳಪ್ಪ ಕುಲ್ಲೋಳ್ಳಿ, ಶಿವಾನಂದ ಕುಂಕೂರ, ಕಾಶಪ್ಪ ಉಳವಿ, ಬ ವರ್ಗದಿಂದ ಈರಣ್ಣ ಉಳವಿ, ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಲ್ಹಾದ್ ಘಂಟಿ, ಅ ವರ್ಗದ ಶರಣಯ್ಯ(ರಾಜು) ಕಾರಿಮನಿ, ಮಹಿಳಾ ಕ್ಷೇತ್ರದಿಂದ ಕಮಲವ್ವ ಚನ್ನಪ್ಪಗೌಡರ, ನಾಗರತ್ನಾ ವಿಠ್ಠಪ್ಪನವರ, ಎಸ್ಸಿ ಕ್ಷೇತ್ರದಿಂದ ದೊಡ್ಡಪ್ಪ ಮಾಳಗಿ, ಎಸ್ಟಿ ಕ್ಷೇತ್ರದಿಂದ ಫಕೀರಪ್ಪ ಹೋಳಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಕಿತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕಷ್ಣಾಜಿ ಕುಲಕರ್ಣಿ, ಮುದಕಪ್ಪ ಮರಡಿ, ಮಹಾದೇವ ಮಡಿವಾಳರ, ಶಿವಾನಂದ ದಿವಾಣದ, ಸಲೀಮ ಬಸ್ತವಾಡ, ಮಂಜುನಾಥ ಹಾರೂಗೊಪ್ಪ, ಶ್ರೀಶೆಲ ಹಡಗಿನಹಾಳ, ಮಡಿವಾಳಪ್ಪ ಮೆಳವಂಕಿ, ಬಸವರಾಜ ಅಂಗಡಿ, ಚಿದಾನಂದ ಬೆಳಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net