ನಮ್ಮೂರ ಜಾಣ ಕಾರ್ಯಕ್ರಮ ಯಶಸ್ವಿ

web1
ಘಟನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಮ್ಮೂರ ಜಾಣ ಕಾರ್ಯಕ್ರಮಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸೌಜನ್ಯಾ ಬಾನಿಗೆ ಸನ್ಮಾನಿಸಲಾಯಿತು. ಬಾಬು ಗಲಗಲಿ, ಜಯಪಾಲ ಬಸರಿಕೊಡಿ, ಶ್ರೀಕಾಂತ ಅಥಣಿ, ಉಮೇಶ ಅವಟಿ ಇತರರು ಇದ್ದರು.
Published on

ನಂದೇಶ್ವರ: ಸಮೀಪದ ಘಟನಟ್ಟಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಸವೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಈಚೆಗೆ ನಮ್ಮೂರ ಜಾಣ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದಿಂದ ಪಲ್ಲವಿ ಘೋಷರವಾಡ ಪ್ರಥಮ ಸ್ಥಾನ, ಸೌಜನ್ಯ ಬಾನಿ ದ್ವಿತೀಯ ಹಾಗೂ ಸಂಗಮೇಶ ಮುಧೋಳ ತೃತೀಯ ಸ್ಥಾನ ಪಡೆದುಕೊಂಡರು. ಪ್ರೌಢ ಶಾಲಾ ವಿಭಾಗದಲ್ಲಿ ನಿವೇದಿತಾ ಗಲಗಲಿ ಪ್ರಥಮ, ಸಹನಾ ಪೂಜಾರಿ ದ್ವಿತೀಯ ಹಾಗೂ ಅನುಶ್ರೀ ಸೊಂಡಿ ತೃತೀಯ ಸ್ಥಾನ ಪಡೆದುಕೊಂಡರು.

ಕಾಲೇಜು ವಿಭಾಗದಿಂದ ರಾಹುಲ ನಿಲಜಗಿ ಪ್ರಥಮ, ಅಪೂರ್ವ ಸವದಿ ದ್ವಿತೀಯ ಹಾಗೂ ಮಹೇಶ ಉಮರಾಣಿ ತೃತೀಯ ಸ್ಥಾನ ಪಡೆದುಕೊಂಡರು. ವಿದ್ಯಾರ್ಥಿನಿ ಸೌಜನ್ಯಾ ಬಾನಿ ಅವಳನ್ನು ಗ್ರಾಮದ ಹಿರಿಯರು ಸತ್ಕರಿಸಿದರು. ಬೆಳಗಾವಿ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಾಬು ಗಲಗಲಿ, ಜಯಪಾಲ ಬಸರಿಕೊಡಿ, ಶ್ರೀಕಾಂತ ಅಥಣಿ, ಉಮೇಶ ಅವಟಿ, ಬಸವರಾಜ ಗಲಗಲಿ, ಕುಮಾರ ಜಮಖಂಡಿ, ಜಯಪಾಲ ಪಾಲಬಾವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net