ಹೊಳೆಹುಲಿಯಪ್ಪನಿಗೆ ನಮೋ ನಮಃ

YLP HULIYAPPA
Published on

ಯಲ್ಲಾಪುರ: ನರಕ ಚತುದರ್ಶಿಯನ್ನು ತಾಲೂಕಿನಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೇಡ್ತಿ ಸೇತುವೆ ಬಳಿಯಿರುವ ಹೊಳೆಹುಲಿಯಪ್ಪನಿಗೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ಹಣ್ಣುಕಾಯಿ, ನೈವೇದ್ಯ ಸರ್ಮಪಿಸಿದರು. ಹೊಳೆಹುಲಿಯಪ್ಪ ದೇವರಿಗೆ ಒಡೆದು ಇಡಲಾಗಿದ್ದ ತೆಂಗಿನಕಾಯಿಗಳ ಸಾಲು ಗಮನ ಸೆಳೆಯಿತು.

ರೈತರು ತಾವು ಸಾಕಿದ ದನ-ಕರುಗಳ ರಕ್ಷಣೆಗಾಗಿ ದೀಪಾವಳಿ ಸಂದರ್ಭದಲ್ಲಿ ಹುಲಿಯಪ್ಪನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಈ ಭಾಗದ ವಿಶೇಷತೆಯಾಗಿದೆ. ಅದರಂತೆ ತೇಲಂಗಾರಿನ ಹುಲಿಯಪ್ಪನಕಟ್ಟೆ, ದೇಹಳ್ಳಿಯ ಹುಲಿಯಪ್ಪನಕಟ್ಟೆ, ಚವತ್ತಿಯ ಹುಲಿಯಪ್ಪನಕಟ್ಟೆ ಸೇರಿ ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ಹುಲಿದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net