ಕೊಳ್ಳೇಗಾಲಕ್ಕೆ ಆಗಮಿಸಿದ ನಮೋ ಬ್ರಿಗೇಡ್ ಬೈಕ್ ಯಾತ್ರೆ

29kgl-4.,,
Published on

ಕೊಳ್ಳೇಗಾಲ: ಜನ-ಗಣ-ಮನ ಬೆಸೆಯೋಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲೆಬೆಲೆ ನೇತೃತ್ವದಲ್ಲಿ ಕೋಲಾರದಿಂದ ಪ್ರಾರಂಭಿಸಿರುವ ನಮೋ ಬ್ರಿಗೇಡ್‌ನ ಬೈಕ್ ಯಾತ್ರೆ ಶುಕ್ರವಾರ ಪಟ್ಟಣಕ್ಕೆ ಆಗಮಿಸಿತು.


ಈ ವೇಳೆ ಇಲ್ಲಿನ ಬಿಜೆಪಿ ಕಾರ್ಯಕರ್ತರ ಜತೆಗೂಡಿ ಚಕ್ರವರ್ತಿ ಸೂಲಿಬೆಲೆ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ಜನ-ಗಣ-ಮನ ಬೆಸೆಯೋಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೆ.28 ರಂದು ಕೋಲಾರದಿಂದ ನಮೋ ಬ್ರಿ ಗೇಡ್‌ನ ಬೈಕ್ ಯಾತ್ರೆ ಕೈಗೊಂಡಿದ್ದೇವೆ. ರಾಜ್ಯಾದ್ಯಂತ ಸಂಚರಿಸುತ್ತ್ತಾ ಭಿನ್ನ ಭಿನ್ನ ಸಮುದಾಯದ ಜನರೊಂದಿಗೆ ಸಂವಾದ ನಡೆಸುತ್ತಾ ನರೇಂದ್ರ ಮೋದಿಯ ಅಭಿವೃದ್ಧಿ ಕೆಲಸಗಳನ್ನು ಮನೆ-ಮನಗಳಿಗೆ ಮುಟ್ಟಿಸುವುದು ಇದರ ಉದ್ದೇಶ ಎಂದರು.


ಈ ವೇಳೆ ದಾರಿ ಉದ್ದಕ್ಕೂ ಕಾವೇರಿ ಹೋರಾಟಗಾರಕ್ಕೂ ಬೆಂಬಲ ನೀಡಿದ್ದೇವೆ. ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿದ ಸ್ಥಳ ಹಾಗೂ ಅಧ್ಯಯನ ಮಾಡಿದ ಜಾಗವನ್ನು ಪಂಚ ತೀರ್ಥವಾಗಿ ನಿರ್ಮಿಸಿದ್ದಾರೆ. ಆದ್ದರಿಂದ ಇನ್ನು ಐದು ವರ್ಷಗಳ ಕಾಲ ಆವರ ನಾಯಕತ್ವ ಇರಬೇಕು ಎಂಬ ಸಂಕಲ್ಪ ಮಾಡಿ ಈ ಯಾತ್ರೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.


ಮಾಜಿ ಶಾಸಕ ಎಸ್.ಬಾಲರಾಜು, ಎಪಿಎಸ್ ಟೈಕ್ಸ್‌ಟೈಲ್ಸ್ ಮಾಲೀಕ ಎ.ಡಿ.ಕುಮಾರಕೃಷ್ಣ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಜಿಲ್ಲಾ ವಕ್ತಾರ ಬಸವರಾಜಪ್ಪ, ತೇರಂಬಳ್ಳಿ ಬಸಪ್ಪ, ಆಲಹಳ್ಳಿ ಕೂಸಪ್ಪ, ಆರ್‌ಎಸ್‌ಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಕುಮಾರ್, ತಾಲೂಕು ಕಾರ್ಯದರ್ಶಿ ಲೋಕೇಶ್, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ರಘು, ಹಿಂದು ಜಾಗರಣಾ ವೇದಿಕೆಯ ಶಶಾಂಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net