

ಮೈಸೂರು: ಉತ್ತಮ ಪ್ರದರ್ಶನ ನೀಡಿದ ತುಮಕೂರಿನ ನಮೋ ಭಾರತ್ ತಂಡ ಹೊನಲು ಬೆಳಕಿನ ಜೆ.ಪಿ.ಕಪ್ ಕ್ರಿಕೆಟ್‌ನ ಪ್ರಥಮ ಸ್ಥಾನ ಪಡೆಯಿತು.
ಚೇತನ್‌ರಾಜ್ ಎನ್. ಅಭಿಮಾನಿಗಳ ಬಳಗ ಹಾಗೂ ಭವನ್‌ರಾಜ್ ಫೌಂಡೇಷನ್ ವತಿಯಿಂದ ಜೆ.ಪಿ.ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡುವ ಮೂಲಕ 1 ಲಕ್ಷ ರೂ.ನಗದು ಬಹುಮಾನ ಪಡೆಯಿತು.
ಜೆ.ಪಿ.ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು, ತುಮಕೂರು, ಮಂಗಳೂರು, ಹಾಸನ ಸೇರಿದಂತೆ ವಿವಿಧೆಯಿಂದ 35 ತಂಡಗಳು ಭಾಗವಹಿಸಿದ್ದವು. ಭಾನುವಾರ ಮಧ್ಯ ರಾತ್ರಿ ವರೆಗೂ ಪಂದ್ಯಗಳು ನಡೆದವು.