

ಪ್ರಶಾಂತ ಭಾಗ್ವತ ಉಡುಪಿ
ಕಲೆ ಯಾರೊಬ್ಬರ ಸ್ವತ್ತಲ್ಲ. ಆದರೆ, ಎಲ್ಲರಿಗೂ ಸುಲಭವಾಗಿ ಒಲಿಯುವುದೂ ಇಲ್ಲ. ಅನೇಕರಿಗೆ ಅದು ರಕ್ತಗತವಾಗಿದ್ದರೆ, ಬಹಳ ಮಂದಿಗದು ಶ್ರಮಲದ ಸಿದ್ಧಿ. ಅಂತಹ ಕೈಚಳಕದ ಚಿತ್ರಕಲೆಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ.
ಮಣಿಪಾಲದಲ್ಲಿರುವ ತ್ರಿವರ್ಣ ಆರ್ಟ್ ಕ್ಲಾಸ್ನ 7ರಿಂದ 18 ವರ್ಷದೊಳಗಿನ (ಕಿರಿಯರ ವಿಭಾಗ) ಆಯ್ದ 32 ವಿದ್ಯಾರ್ಥಿಗಳು ನಮ್ಮೂರು ಚಿತ್ರಿಸಿದ್ದಾರೆ. ನೋಡುಗರಿಗೆ ಊರಿನ ಸಂಸ್ಕೃತಿ ಪ್ರತಿಬಿಂಬಿಸಲು ಅಣಿಯಾಗಿದ್ದಾರೆ.
ಚಾಲನೆ ನೀಡಲಿದ್ದಾರೆ.
ತ್ರಿವರ್ಣ ಕ್ಲಾಸ್ನಲ್ಲಿ 7ರಿಂದ 75 ವರ್ಷದವರೂ ಸಹ ಕಲಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಪರಿಸರದ ಅವಿಸ್ಮರಣೀಯ ಸ್ಥಳ, ಮಣ್ಣಿನ ಸಾರ ಅರ್ಥೈಸುವುದು ಹಾಗೂ ಸಂಸ್ಕೃತಿ ಬಿಂಬಿಸುವುದು ನಮ್ಮೂರು ಪ್ರದರ್ಶನದ ವಿಶೇಷತೆ. ಕಲಾ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲು ಸೆ.5ರಿಂದ 3 ದಿನ ಎಕ್ಸಿಬಿಷನ್ ಏರ್ಪಡಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 7:30ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವಿದೆ. | ಹರೀಶ್ ಸಾಗಾ. ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ