ನಮ್ಮೂರ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ

dusara
ಸಾಬ್ರಕಟ್ಟೆ-ಯಡ್ತಾಡಿ ಶ್ರೀ ವಿನಾಯಕ ಯುವಕ ಮಂಡಲ ಆಶ್ರಯದಲ್ಲಿ ಅಕ್ಟೋಬರ್ 9ರಿಂದ 12ರ ತನಕ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಮ್ಮೂರ ದಸರಾ-2024 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರಾಜೇಶ್ ಐತಾಳ್ ಅನಾವರಣಗೊಳಿಸಿದರು. ಯುವಕ ಮಂಡಲ ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು
Published on

ಕೋಟ: ಸಾಬ್ರಕಟ್ಟೆ-ಯಡ್ತಾಡಿ ಶ್ರೀ ವಿನಾಯಕ ಯುವಕ ಮಂಡಲ ಆಶ್ರಯದಲ್ಲಿ ಅಕ್ಟೋಬರ್ 9ರಿಂದ 12ರ ತನಕ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಮ್ಮೂರ ದಸರಾ-2024(ಭಾವ ಭಕ್ತಿಯ ಸಂಗಮ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವೇದಮೂರ್ತಿ ರಾಜೇಶ್ ಐತಾಳ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿ, ಯುವಕ ಮಂಡಲಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಸ್ಥಾಪನೆ ಉದ್ದೇಶ ಸಾಕಾರಗೊಳ್ಳುತ್ತದೆ. ಯುವಕರು ಒಂದುಗೂಡಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನಾವರಣ ಸಾಧ್ಯ ಎಂದರು. ಯುವಕ ಮಂಡಲ ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net