ಬೆಟ್ಟಕೊಪ್ಪದಲ್ಲಿ ‘ನಮ್ಮನೆ ಹಬ್ಬ’ ಡಿ.8ರಂದು

Pooja
Published on

ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ವತಿಯಿಂದ 13ನೇ ವರ್ಷದ ನಮ್ಮನೆ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಡಿ. 8ರಂದು ಸಂಜೆ 5ರಿಂದ ತಾಲೂಕಿನ ಬೆಟ್ಟಕೊಪ್ಪದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಗಾನ ಸಂಭ್ರಮ, ಯಕ್ಷರೂಪಕದ ದಶಮಾನೋತ್ಸವ, ನೂತನ ರೂಪಕ ಲೋಕಾರ್ಪಣೆ, ಪ್ರಶಸ್ತಿ, ಪುರಸ್ಕಾರ ಪ್ರದಾನ, ಕ್ಯಾಲೆಂಡರ್ ಬಿಡುಗಡೆ ನಡೆಯಲಿದೆ. ಕಾರ್ಯಕ್ರಮವನ್ನು ಚಲನಚಿತ್ರ ನಟಿ ಪೂಜಾ ಗಾಂಧಿ ಉದ್ಘಾಟಿಸುವರು. ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಬೆಂಗಳೂರಿನ ಅವಿನಾಶಿ ಸಂಸ್ಥೆ ಮುಖ್ಯಸ್ಥ ಅಣ್ಣಾರಾಯ ತಳವಾರ ಅವರಿಗೆ ನಮ್ಮನೆ ಪ್ರಶಸ್ತಿ, ಧಾರವಾಡದ ಯುವ ಗಾಯಕಿ ಐಶ್ವರ್ಯಾ ದೇಸಾಯಿ ಅವರಿಗೆ ನಮ್ಮನೆ ಯುವ ಪ್ರಶಸ್ತಿಯನ್ನು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಪ್ರದಾನ ಮಾಡಲಿದ್ದಾರೆ. ಅಭ್ಯಾಗತರಾಗಿ ವಿ. ಉಮಾಕಾಂತ ಭಟ್ಟ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಭಾಗವಹಿಸಲಿದ್ದು, ಪತ್ರಕರ್ತ ರವೀಂದ್ರಭಟ್ ಐನಕೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರವಿ ಮೂರೂರು ಅವರಿಂದ ಗಾಯನ ನಡೆಯಲಿದ್ದು, ಹಾರ್ಮೋನಿಯಂನಲ್ಲಿ ಸತೀಶ ಹೆಗ್ಗಾರು, ತಬಲಾದಲ್ಲಿ ಗಣೇಶ ಗುಂಡ್ಕಲ್ ಸಾತ್ ನೀಡಲಿದ್ದಾರೆ. ವಿಶ್ವಶಾಂತಿ ಸರಣಿಯ 10ನೇಯ ನೂತನ ಯಕ್ಷ ನೃತ್ಯ ರೂಪಕ ಭಾವ ಸೌಂದರ್ಯದ ದಿವ್ಯದರ್ಶನ ’ವಿಶ್ವಾಭಿಗಮನಮ್’ ಅನಾವರಣಗೊಳ್ಳಲಿದೆ. ನೂತನ ರೂಪಕವನ್ನು 50 ನಿಮಿಷಗಳ ಕಾಲ ತುಳಸಿ ಹೆಗಡೆ ಪ್ರಸ್ತುತಪಡಿಸುವರು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net