'ನಮ್ಮ ಯಾತ್ರಿ' ಕ್ಯಾಬ್​ ಸೇವೆಗೆ ಚಾಲನೆ; ವಿವಿಧ ದರ್ಜೆಯ ಸೇವೆ ಲಭ್ಯ

Cab
Published on

ಬೆಂಗಳೂರು: ಆಟೋ ಚಾಲಕರು ಒಂದಾಗಿ ರಚಿಸಿಕೊಂಡಿದ್ದ 'ನಮ್ಮ ಯಾತ್ರಿ' ಆ್ಯಪ್​ ಏ.16ರಿಂದ ನಗರದಲ್ಲಿ ಕ್ಯಾಬ್​ ಸೇವೆ ಆರಂಭಿಸಿದೆ.

ನಮ್ಮ ಯಾತ್ರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಗಿಜನ್​ ಸೆಲ್ವನ್​ ಮಾತನಾಡಿ, ಅತ್ಯಾಧುನಿಕ ತಂತ್ರಾನದ ಮೂಲಕ ಚಾಲಕರನ್ನು ಸಬಲೀಕರಣಗೊಳಿಸಲು ಮುಂದಾಗಿದೆ. ಈಗಾಗಲೇ 25 ಸಾವಿರ ಕ್ಯಾಬ್​ ಡೆವರ್​ಗಳನ್ನು ಹೊಂದಿದ್ದು, ಮುಂದಿನ 5 ತಿಂಗಳಲ್ಲಿ 1 ಲಕ್ಕೂ ಹೆಚ್ಚು ಚಾಲಕರೊಂದಿಗೆ ಸಂಪರ್ಕ ಸಾಧಿಸಲಿದೆ. ವೇಗದ ಪಿಕಪ್​, ಕಡಿಮೆ ರದ್ದತಿ, ಸ್ಪರ್ಧಾತ್ಮಕ ಬೆಲೆ ಹಾಗೂ ವಿಶ್ವಾಸಾರ್ಹ ಸೇವೆ ನೀಡಲು "ನಮ್ಮ ಯಾತ್ರಿ' ಬದ್ಧವಾಗಿದೆ. ನಾನ್​ ಎಸಿ ಮಿನಿ, ಎಸಿ ಮಿನಿ, ಸೆಡಾನ್​ ಮತ್ತು ಎಕ್ಸ್​ಎಲ್​ ಕ್ಯಾಬ್​ ಸೇವೆ ಲಭ್ಯವಿದೆ ಎಂದರು.

ಇಂಡಿಯನ್​ ಫೆಡರೇಷನ್​ ಆಫ್​ ಆರ್ ಬೇಸ್ಡ್​ ಟ್ರಾನ್ಸ್​ಪೋರ್ಟ್​ ವರ್ಕರ್ಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್​ ಸಲಾವುದ್ದೀನ್​ ಮಾತನಾಡಿ, ಚಾಲಕರ ಸಬಲೀಕರಣಕ್ಕಾಗಿ ಯಾವುದೇ ಕಮಿಷನ್​ ಇಲ್ಲದೆ ಈ ಆ್ಯಪ್​ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಚಾಲಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

'ನಮ್ಮ ಯಾತ್ರಿ' ಸ್ವದೇಶಿ ಆ್ಯಪ್​ ಆಗಿದ್ದು, ಗುಣಮಟ್ಟದ ಗ್ರಾಹಕ ಸೇವೆ ನೀಡುತ್ತಿದೆ. ಇದರಿಂದ ನಗರದಲ್ಲಿರುವ ಚಾಲಕರಿಗೆ ಸಹಕಾರಿಯಾಗಿದೆ. ಹೊಸತನ, ಪಾರದರ್ಶಕತೆ ಹಾಗೂ ಉತ್ತಮ ಸೇವೆಯ ಮೂಲಕ ನಮ್ಮ ಯಾತ್ರಿ ಕ್ಯಾಬ್​ ಸೇವೆ ಯಶಸ್ವಿಯಾಗಲಿ. -ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಗುಣಮಟ್ಟದ ಸೇವೆ

'ನಮ್ಮ ಯಾತ್ರಿ' ಈವರೆಗೆ 60 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸೇವೆ ನೀಡಿದ್ದು, 2.5 ಕೋಟಿಗೂ ಹೆಚ್ಚು ಟ್ರಿಪ್​ ಪಡೆದುಕೊಂಡಿದೆ. ಇದರಿಂದ ಚಾಲಕರು ಸುಮಾರು 420 ಕೋಟಿ ರೂ. ನೇರ ಗಳಿಕೆ ಮಾಡಲು ಸಾಧ್ಯವಾಗಿದೆ. ಇದೀಗ ನಗರದಲ್ಲಿ ಕ್ಯಾಬ್​ ಸೇವೆ ಆರಂಭಗೊಂಡಿರುವುದು ಇನ್ನಷ್ಟು ಚಾಲಕರಿಗೆ ಆದಾಯ ಮಾರ್ಗ ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯಾದ್ಯಂತ ವಿಸ್ತರಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಗುಣಮಟ್ಟದ ಸೇವೆ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net