ಮಹಾನಗರದ ಅಂದ ಹೆಚ್ಚಿಸುವ ‘ನಮ್ಮ ಕಿಚನ್’

h14-Namma Kitchen 1
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಬಳಿಯ ಡಿವೈನ್ ಗ್ರುಪ್‌ನ ‘ನಮ್ಮ ಕಿಚನ್’ ಹೊಸ ಮಳಿಗೆಯನ್ನು ಶಾಸಕ ಮಹೇಶ ಟೆಂಗಿನಕಾಯಿ, ಕಿರುತೆರೆ ನಟಿ ವೈಷ್ಣವಿಗೌಡ, ಸಿಹಿ ಖ್ಯಾತಿಯ ಬಾಲನಟಿ ರಿತೂ ಸಿಂಗ್ ಅವರು ಬುಧವಾರ ಉದ್ಘಾಟಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನಮ್ಮ ವಾಣಿಜ್ಯ ನಗರಿಗೆ ಇಂಥ ವಾಣಿಜ್ಯ ಸಂಕೀರ್ಣಗಳು ಬರಬೇಕು. ಮಹಾನಗರದ ಅಂದ ಹೆಚ್ಚಿಸುವುದಲ್ಲದೇ ಗ್ರಾಹಕರ ಮನೋ ಅಭಿಲಾಷೆ ಈಡೇರಿಸಲಿವೆ. ನಮ್ಮ ಕಿಚನ್ ಮಳಿಗೆಯಲ್ಲಿ ಒಂದೇ ಸೂರಿನಡಿ ಅಡುಗೆ ಮನೆಗೆ ಬೇಕಾಗುವಂಥ ಸಾಮಗ್ರಿಗಳನ್ನು ಪೂರೈಸಲಿದೆ. ಗ್ರಾಹಕರಿಗೂ ಇದು ಇಷ್ಟವಾಗಲಿದೆ ಎಂದರು.
ಕಿರುತೆರೆ ನಟಿ ವೈಷ್ಣವಿಗೌಡ, ಸಿಹಿ ಖ್ಯಾತಿಯ ಬಾಲನಟಿ ರಿತೂಸಿಂಗ್ ಮಾತನಾಡಿ, ಹುಬ್ಬಳ್ಳಿಯ ಜನರು, ಇಲ್ಲಿಯ ಭಾಷೆ ನಮಗಿಷ್ಟ. ಬಹಳಷ್ಟು ಫ್ಯಾನ್ಸ್ ಇಲ್ಲಿಯವರೇ ಇದ್ದಾರೆ. ಇಂಥ ನಗರಕ್ಕೆ ಬಂದು ನಮ್ಮ ಕಿಚನ್ ಮಳಿಗೆ ಉದ್ಘಾಟಿಸುತ್ತಿರುವುದರಿಂದ ಬಹಳಷ್ಟು ಖುಷಿಯಾಗುತ್ತಿದೆ ಎಂದರು.
ನಮ್ಮ ಕಿಚನ್ ಮಾಲೀಕ ಜಾನ್ ವಿಲ್ಸನ್, ಸಿಂಧೂ ವಿಲ್ಸನ್, ಅಲ್ಫೆನ್ ವಿಲ್ಸನ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಶಹಾಜಿ ಥಾಮಸ್, ವೆಸ್ಲಿ ಜೋಸೆಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net