

ಹುಬ್ಬಳ್ಳಿ: ಪೂರ್ವ ಕ್ಷೇತ್ರದ ಜನರ ಉತ್ತಮ ಆರೋಗ್ಯ ಸೇವೆಗೆ ಹೊಸ ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ ಮಾಡಲಾಗಿದೆ ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ರಾಜ್ಯ ಸರ್ಕಾರದಿಂದ ಮಂಜೂರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಅನುಷ್ಠಾನಗೊಳಿಸಿದ ಇಲ್ಲಿಯ ಎಂ. ಅರಳಿಕಟ್ಟಿ, ಸೋನಿಯಾಗಾಂಧಿ ನಗರ, ಪಡದಯ್ಯನ ಹಕ್ಕಲ, ಮೇದಾರ ಓಣಿ ಮತ್ತು ಜಗ್ಲಿಪೇಟೆ ಒಡ್ಡರ ಓಣಿ ಸಮುದಾಯ ಭವನದಲ್ಲಿ ಸ್ಥಾಪಿಸಿದ ‘ನಮ್ಮ ಕ್ಲಿನಿಕ್’ ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ 11 ವರ್ಷದಲ್ಲಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರಂತರವಾಗಿ ಜನರ ಆರೋಗ್ಯದ ಸೇವೆ ನೀಡುತ್ತಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಸ್.ಎಂ. ಕೃಷ್ಣ ನಗರದಲ್ಲಿ ಕೇವಲ 1ನಮ್ಮ ಕ್ಲಿನಿಕ್ ಮಾತ್ರ ಮಂಜೂರು ಮಾಡಲಾಗಿತ್ತು. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ನಮ್ಮ ಕ್ಷೇತ್ರಕ್ಕೆ ಅವಶ್ಯವಿರುವ 5 ಕ್ಲಿನಿಕ್‌ಗಳನ್ನು ಮಂಜೂರು ಮಾಡುವಂತೆ ಒತ್ತಡ ಹಾಕಿ ನಿರ್ಮಿಸಿ ಉದ್ಘಾಟಿಸಲಾಗಿದೆ ಎಂದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಎಸ್.ಎಂ. ಹೊನಕೇರಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಆರ್‌ಸಿಎಚ್‌ಒ ಡಾ. ಸುಜಾತ ಹಸವಿಮಠ, ಡಿಎಸ್‌ಒ ಡಾ.ಎಫ್.ಕೆ. ಪರಶುರಾಮ, ತಾಲೂಕು ಆರೋಗ್ಯಾಧಿಕಾರಿ ಡಾ. ಪರಶುರಾಮ ಹುಲಗೇಶ ಇಂಜಗನರಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಪಾಲಿಕೆ ಸದಸ್ಯರಾದ ದೊರೆರಾಜ ಮನ್ನೆಕುಂಟ್ಲ, ಸುನಿತಾ ಬುರಬರೆ, ನಜೀರ ಹೊನ್ಯಾಳ, ಮನ್ಸೂರಾ ಮುದಗಲ್, ಸುಮಿತ್ರಾ ಗುಂಜಾಳ, ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ಯಮನೂರ ಜಾಧವ, ಸುಧಾ ಮನ್ನೆಕುಂಟ್ಲ, ಮುಖಂಡರಾದ ಶರೀಫ ಆದ್ವಾನಿ, ಸೈಯದ್ ಸಲೀಂ ಮುಲ್ಲಾ, ಮುಸ್ತಾಕ ಮುದಗಲ್, ಅಲ್ತಾಫ್ ಮುಲ್ಲಾ, ಹನುಮಂತಪ್ಪ ದೊಡ್ಡಮನಿ, ಕಾಸೀಮ ಕೂಡಲಗಿ, ಶರೀಫ ನದಾಫ್ ಇತರರಿದ್ದರು.