ನಮ್ಮ ಹಿರಿಯರು ನಮ್ಮ ಗೌರವ

Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜನಗರ ಪ್ರೋಬಸ್ ಕ್ಲಬ್ ವತಿಯಿಂದ ಕೆಎಲ್ಇ ಧ್ವನಿ ಎಫ್ಎಂ ಸಹಯೋಗದಲ್ಲಿ ನಮ್ಮ ಹಿರಿಯರು ನಮ್ಮ ಗೌರವ ಕಾರ್ಯಕ್ರಮವನ್ನು ಜ. 15ರಂದು ಸಂಜೆ 5.30ಕ್ಕೆ ಲಿಂಗರಾಜನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶ ಡಾ. ಪರಶುರಾಮ ದೊಡ್ಡಮನಿ, ಬಾಗಲಕೋಟೆ ಸಮುದಾಯ ರೇಡಿಯೋ ಕೇಂದ್ರದ ಭರತ ಬಡಿಗೇರ, ಕೆಎಲ್ಇ ಧ್ವನಿ ಸಂಯೋಜಕ ರವೀಂದ್ರ ಕವಠೇಕರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪ್ರೋಬಸ್ ಕ್ಲಬ್ ಅಧ್ಯಕ್ಷ ಡಾ. ಬಸವರಾಜ ಕೋಟಿ ಅಧ್ಯಕ್ಷತೆ ವಹಿಸುವರು ಎಂದು ಕ್ಲಬ್ ನಿರ್ದೇಶಕ ಡಾ. ಬಿ.ಎಸ್. ಮಾಳವಾಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net