ಯುವಪೀಳಿಗೆ ಇತಿಹಾಸ ಪುರುಷರನ್ನು ಸ್ಮರಿಸಲಿ

27 gvt 06
ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಹರಿಹರ ಹಕ್ಕಬುಕ್ಕ ವೃತ್ತದ ನಾಮಲಕವನ್ನು ಭಾನುವಾರ ಅನಾವರಣಗೊಳಿಸಲಾಯಿತು. ಅಖಿಲ ಕರ್ನಾಟಕ ಹರಿಹರ ಹಕ್ಕ ಬುಕ್ಕ ನಾಯಕ ಮಹಾವೇದಿಕೆ ಸಂಚಾಲಕ ಹರನಾಯಕ, ಪ್ರಮುಖರಾದ ಹತ್ತಿಮರದ ಹನುಮಂತಪ್ಪ ನಾಯಕ, ಹತ್ತಿಮರದ ರಾಮಣ್ಣ ನಾಯಕ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ವಡ್ಡರಹಟ್ಟಿಯಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಹರಿಹರ ಹಕ್ಕಬುಕ್ಕ ವೃತ್ತದ ನಾಮಲಕವನ್ನು ಭಾನುವಾರ ಅನಾವರಣಗೊಳಿಸಲಾಯಿತು.

ನಾಮಲಕದ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಅನಾವರಣಗೊಳಿಸಿದ ಅಖಿಲ ಕರ್ನಾಟಕ ಹರಿಹರ ಹಕ್ಕ ಬುಕ್ಕ ನಾಯಕ ಮಹಾವೇದಿಕೆ ಸಂಚಾಲಕ ಹರನಾಯಕ ಮಾತನಾಡಿ, ದಕ್ಷಿಣ ಭಾರತದಲ್ಲಿ ಧರ್ಮ, ನಾಡು, ನುಡಿ, ಸಂಸ್ಕೃತಿ, ವಾಸ್ತುಶಿಲ್ಪ, ದೇವಾಲಯ ನಿರ್ಮಾಣಗಳ ಮೂಲಕ ಹಿಂದೂ ಧರ್ಮವನ್ನು ಉಳಿಸಿದ ಕೀರ್ತಿ ಹರಿಹರ ಹಕ್ಕಬುಕ್ಕರಿಗೆ ಸಲ್ಲುತ್ತದೆ. ಯುವಪೀಳಿಗೆ ನಮ್ಮದೇ ಇತಿಹಾಸ ಮತ್ತು ಇತಿಹಾಸ ಪುರುಷರನ್ನು ಸ್ಮರಿಸಬೇಕಿದ್ದು, ಪ್ರತಿ ಗ್ರಾಮಗಳಲ್ಲಿ ವಿಜಯನಗರ ಅರಸರ ವೃತ್ತಗಳು ಮತ್ತು ಪುತ್ಥಳಿಗಳು ನಿರ್ಮಾಣವಾಗಬೇಕಿದೆ ಎಂದರು.

ಮುಖಂಡರಾದ ಹತ್ತಿಮರದ ಹನುಮಂತಪ್ಪ ನಾಯಕ, ಹತ್ತಿಮರದ ರಾಮಣ್ಣ ನಾಯಕ, ಸೋಮನಾಳ ಹನುಮಂತಪ್ಪ, ವದ್ಡಟ್ಟಿ ಮುದ್ದಣ್ಣ, ಕೆ.ರಾಜಹುಸೇನ್ ಸಾಬ್, ಎನ್.ಸಿದ್ದಪ್ಪ ನಾಯಕ, ಸಣ್ಣ ಹುಸೇನ್ ಸಾಬ್, ಈರಪ್ಪ, ಪರಶುರಾಮ, ಶಿವರಾಮ, ಟಿ.ರಮೇಶ, ಹತ್ತಿಮರದ ರಾಜು, ಶಿವು, ಹನುಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net