ಟೌನ್‌ಹಾಲ್‌ಗೆ ಯೋಧನ ಹೆಸರಿಡಿ

Untitled design (6)
Published on

ಮಾನ್ವಿ: ಪಟ್ಟಣದಲ್ಲಿನ ಟೌನ್‌ಹಾಲ್ ಕಟ್ಟಡಕ್ಕೆ ಹುತಾತ್ಮ ಯೋಧ, ತಾಲೂಕಿನ ಸಾದಾಪುರ ಗ್ರಾಮದ ಮಂಜುನಾಥ ಅಂಗಡಿ ಹೆಸರಿಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ರಾಜು ಪಿರಂಗಿಗೆ ಮಾಜಿ ಹಾಗೂ ಹಾಲಿ ಸೈನಿಕರು ಶುಕ್ರವಾರ ಮನವಿ ಸಲ್ಲಿಸಿದರು.


ಮಂಜುನಾಥ ಅಂಗಡಿ ಮಣಿಪುರದ ಇಂಫಾಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವೀರ ಮರಣ ಹೊಂದಿದ್ದು, ಟೌನ್‌ಹಾಲ್‌ಗೆ ಅವರ ಹೆಸರಿಡುವುದರಿಂದ ದೇಶಕ್ಕಾಗಿ ಜೀವ ನೀಡಿದ ಯೋಧರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.
-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net