ಈ ಯೋಧ ತನ್ನ ಮಗುವಿಗೆ ಇಟ್ಟ ಹೆಸರು ಕೇಳಿದರೆ ನೀವೂ ಹೆಮ್ಮೆ ಪಡ್ತೀರಿ!

Yodha
Published on

ಉಡುಪಿ: ಕುಂದಾಪುರದ ಪ್ರತಾಪ್ ಶೆಟ್ಟಿ-ಪ್ರತಿಮಾ ದಂಪತಿ ತಮ್ಮ ಪುತ್ರಿಗೆ ಕನ್ನಡ ಎಂದು ಹೆಸರಿಟ್ಟು ಭಾಷಾಭಿಮಾನ ಮೆರೆದಿದ್ದು, ಅದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದು ನಿಮಗೆ ಗೊತ್ತೇ ಇದೆ.

ಅದೇ ರೀತಿಯ ಪ್ರಶಂಸಾರ್ಹ ಹೆಸರೊಂದನ್ನು ಇನ್ನೊಬ್ಬ ದಂಪತಿ ತಮ್ಮ ಮಗುವಿಗೆ ಇಟ್ಟಿರುವುದು ಈಗ ವರದಿಯಾಗಿದೆ. ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಗ್ರಾಮದ ಆಶಾ-ಪ್ರಶಾಂತ್ ಪೂಜಾರಿ ದಂಪತಿ ತಮ್ಮ ಮಗುವಿಗೆ ‘‘ಸೈನ್ಯ’’ ಎಂದು ನಾಮಕರಣ ಮಾಡಿದ್ದಾರೆ! ಹಲವು ವರ್ಷಗಳಿಂದ ಸೇನೆಯ ಕರ್ತವ್ಯದಲ್ಲಿರುವ ಪ್ರಶಾಂತ್ ಪೂಜಾರಿ ಅವರು, ಮಗುವಿಗೆ ಹೆಸರಿಡುವ ಮೂಲಕ ತಮ್ಮ ಕರ್ತವ್ಯಕ್ಕೆ ಈ ಮೂಲಕ ಗೌರವ ಸೂಚಿಸಿದ್ದಾರೆ. ಪ್ರಸ್ತುತ ಪ್ರಶಾಂತ್ ಜಮ್ಮು-ಕಾಶ್ಮೀರದಲ್ಲಿ ಸೇವಾನಿರತರಾಗಿದ್ದಾರೆ. ಇವರ ಈ ಸೇವೆ ಮತ್ತು ಸೈನ್ಯದ ಮೇಲಿನ ಅಭಿಮಾನ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net