

ಸಿದ್ದಾಪುರ: ಶಿರಸಿಯಲ್ಲಿ ನೂತನವಾಗಿ ನಿರ್ವಣಗೊಂಡ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಜಿಲ್ಲೆಯ ಹೆಮ್ಮೆಯ ರಾಷ್ಟ್ರ ನಾಯಕ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಹೆಸರಿಡಬೇಕು ಎಂದು ಪಟ್ಟಣದ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರು ಜಿಲ್ಲೆಯ ಹೆಮ್ಮೆಯ ಪುತ್ರರು. ರಾಷ್ಟ್ರ ನಾಯಕರಾಗಿ ಹೆಸರು ಮಾಡಿದವರು. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಿದವರು. ವಿದ್ಯಾರ್ಥಿಗಳಿಗೆ ಬಸ್ ಪಾಸ್, ಬಡ ಮಹಿಳೆೆಯರಿಗೆ ಹೆರಿಗೆ ಭತ್ಯೆ ಮತ್ತಿತರ ಜನಪರ ಕಾರ್ಯಕ್ರಮ ಜಾರಿಗೊಳಿಸಿ ಬಡವರ ಬದುಕನ್ನು ಎತ್ತರಿಸುವಲ್ಲಿ ಶ್ರಮಿಸಿದವರು. ರಾಮಕೃಷ್ಣ ಹೆಗಡೆಯವರ ನೆನಪು ಸದಾ ಹಸಿರಾಗಿರುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕೆ ಶಿರಸಿ ಬಸ್ ನಿಲ್ದಾಣಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಬೇಕು ಎಂದು ಕೆ.ಎಂ. ಹೆಗಡೆ ಹೊಳ್ಳಾಡೆ, ರಾಜು ಹೆಗಡೆ ಕಂಚಿಕೈ, ನರಹರಿ ಹೆಗಡೆ ಕುಳಿಮನೆ, ಸುರೇಶ ಹೆಗಡೆ ಅನುಗ್ರಹ ಸಿದ್ದಾಪುರ, ಶ್ರೀಧರ ನಾಯ್ಕ ಮುಂಡಿಗೆತಗ್ಗು, ಮಾರುತಿ ಬರ್ಮ ಮಡಿವಾಳ ಬೈಲಳ್ಳಿ, ಇತರರು ಒತ್ತಾಯಿಸಿದ್ದಾರೆ.