

ಬೆಳವಣಿಕಿ(ರೋಣ ತಾ.): ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಗುರುವಾರ ಹೆಸರು ಖರೀದಿ ಕೇಂದ್ರ ಉದ್ಘಾಟಿಸಲಾಯಿತು. ಪ್ರತಿ ಕ್ವಿಂಟಾಲ್‌ಗೆ ರೂ.8682 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ, ರೈತರು ಹೆಸರು ಕಾಳು ಖರೀದಿ ಕೇಂದ್ರದ ಸದುಪಯೋಗ ಪಡೆಯಲು ತಿಳಿಸಲಾಗಿದೆ. ರೈತ ಮುಖಂಡ ನಿಂಗಪ್ಪ ದ್ಯಾವಪ್ಪ ಸಣಕಲ್, ತಿಮ್ಮಣ್ಣ ನಾಗನೂರ, ಸೋಮಶೇಖರ ಚರೇದ, ವೀರನಗೌಡ ಪಾಟೀಲ, ಈಶಪ್ಪ ಹೊಸಂಗಡಿ, ಗ್ರಾಪಂ ಅಧ್ಯಕ್ಷ ಪ್ರವೀಣ ಮಾಡಳ್ಳಿ, ಸಂಗಪ್ಪ ಗುದ್ಲಿ, ವಿಜಯ ಜಂತ್ಲಿ, ಬಸವರಾಜ ನವಲಗುಂದ, ಶರಣಪ್ಪ ಕಾಗಲಗೊಂಬ, ಉಮೇಶ ಭರಡಿ, ಕಪ್ಪತ್ತ ಕುಂಬಾರ, ಸಿಬ್ಬಂದಿ ವೀರಭದ್ರಪ್ಪ ಪುರ್ತಗೇರಿ, ಫಕೀರೇಶ ಗೊರೇಬಾಳ ಪಾಲ್ಗೊಂಡಿದ್ದರು.