ಪ್ರವಾಸಿ ಮಂದಿರ ವೃತ್ತಕ್ಕೆ ನಿಸ್ವಾರ್ಥ ಸೇವಕನ ಹೆಸರು

9nrp 1..
Published on

ಎನ್.ಆರ್.ಪುರ: ಇಲ್ಲಿನ ಪ್ರವಾಸಿ ಮಂದಿರ ವೃತ್ತಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಹೆಸರಿಟ್ಟಿರುವುದು ಶ್ಲಾಘನೀಯ ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ಪ್ರವಾಸಿ ಮಂದಿರ ವೃತ್ತಕ್ಕೆ ಎಂ.ಶ್ರೀನಿವಾಸ್ ವೃತ್ತ ಎಂಬ ನಾಮಫಲಕದ ಅನಾವರಣಗೊಳಿಸಿ ಮಾತನಾಡಿ, ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಊರಿನ ಅಭಿವೃಧ್ಧಿಗೆ ಶ್ರಮಿಸಿದ ಶ್ರೀನಿವಾಸ್ ಅವರು ಸರಳ ಸಜ್ಜನಿಕೆಯ ರಾಜಕಾರಿಣಿಯಾಗಿದ್ದಾರೆ. ಹೊನ್ನೇಕುಡಿಗೆ ಸಂಪರ್ಕ ಸೇತುವೆ, ಮುಖ್ಯ ರಸ್ತೆ ಅಗಲೀಕರಣ, ದೇವಸ್ಥಾನ, ಚರ್ಚ್, ಮಸೀದಿಗಳ ಜೀರ್ಣೋದ್ಧಾರ ಮಾಡಿ ತಮ್ಮ ಹುಟ್ಟೂರಿನ ಋಣ ತೀರಿಸುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲ ಧರ್ಮದವರಿಗೂ ಸಮಾನ ನ್ಯಾಯ ನೀಡಿ ನಮ್ಮೂರನ್ನು ಸರ್ವ ಧರ್ಮದ ಶಾಂತಿಯ ತೋಟವನ್ನಾಗಿಸಿದ ಕೀರ್ತಿ ಎಂ.ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ ಎಂದರು.

ಕಾಂಗ್ರೆಸ್ ಮುಖಂಡರು, ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು. ಪಪಂ ಅಧ್ಯಕ್ಷೆ ಸುರಯ್ಯಭಾನು, ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಮುನಾವರ್‌ಪಾಷಾ, ಆರ್.ಕುಮಾರ ಸ್ವಾಮಿ, ಮುಕುಂದ, ಜುಬೇದಾ, ಶೋಜಾ, ಜಾಮಿಯಾ ಮಸೀದಿ ಅಧ್ಯಕ್ಷ ನಾಸಿರ್, ಅಲ್ನೂರ್ ಮಸೀದಿ ಅಧ್ಯಕ್ಷ ಜಲೀಲ್, ಸವಿತಾ ಸಮಾಜದ ಅಧ್ಯಕ್ಷ ಕುಮಾರ, ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಮನು, ಕೆ.ಎ.ಅಬೂಬೇಕರ್, ಸುನೀಲ್‌ಕುಮಾರ್, ಅಂಜುಂ, ಎಂ.ಮಹೇಶ್, ಸಾಧಿಕ್, ಶ್ರೀಧರಪಾನಿ, ಸುನೀಲ್ ಕುಮಾರ್, ಬಿನು, ಎಚ್.ಎಂ.ಶಿವಣ್ಣ, ಸುರೇಶ್, ಸುಬ್ರಹ್ಮಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net