ಸಂಗೊಳ್ಳಿ ರಾಯಣ್ಣ ಹೆಸರು ಅಜರಾಮರ

10 lxr 3
Published on

ಲಕ್ಷ್ಮೇಶ್ವರ: ಸ್ವಾತಂತ್ರ್ಯ ಹೋರಾಟಗಾರರಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ಅಜರಾಮರವಾಗಿದೆ. ಇಂಥ ವೀರ ಪುರುಷನ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವೇದಿಕೆಯಿಂದ ಸಮಾಜದ ಹಿತಕಾಯುವ ಕಾರ್ಯ ನಡೆಯಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗದಗ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ರಾಯಣ್ಣನ ಪ್ರೇರಣೆಯಿಂದ ಸಂಘಟಿತವಾದ ವೇದಿಕೆಯಿಂದ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ದುರಾಚಾರಗಳ ವಿರುದ್ಧ ಹೋರಾಡುವ ಸಂಘಟನೆ ಇದಾಗಿದೆ. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗವನ್ನು ಗದಗ ಜಿಲ್ಲೆಯಲ್ಲಿ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಸಂಗೊಳ್ಳಿ ರಾಯಣ್ಣ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ವೇಳೆ ಗದಗ ಜಿಲ್ಲಾ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷರಾಗಿ ಬಸವರಾಜ ಹಿರೇಮನಿ ಅಧಿಕಾರ ಸ್ವೀಕರಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ತಾಲೂಕು ಅಧ್ಯಕ್ಷ ಸುರೇಶ ಹಟ್ಟಿ, ಪದಾಧಿಕಾರಿಗಳಾದ ಮಂಜುನಾಥ ಬಟ್ಟೂರ, ಮಹಾಂತೇಶ ಗೌಡನಾಯ್ಕರ, ಮಂಜುನಾಥ ಕಲ್ಲೂರ, ಅನ್ವರಭಾಷಾ, ನಾನಪ್ಪ ಲಮಾಣಿ, ಶಿವಪ್ಪ ಹತ್ತಾಳ, ಮಹ್ಮದರಫೀಕ್ ಕುಡಚಿ, ಯಾಕೂಬಖಾನ್ ಕಾರಡಗಿ, ರಮೇಶ ಮಾಯಣ್ಣವರ, ದೇವಪ್ಪ ಲಮಾಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net