

ಬೆಲಹೊಂಗಲ: ಹೆಸರು ಕಾಳು ಬೆಳೆಗೆ ತಗುಲುತ್ತಿರುವ ಹಳದಿ ನಂಜು ರೋಗ ಮತ್ತು ಬುಡಕೊಳೆ ರೋಗ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಬೇಕು. ಬೆಳೆಗೆ ಪ್ರತಿ ಲೀಟರ್ ನೀರಿಗೆ ಥಯಾಮೆಥಾಕ್ಸಾಮ್ 0.25 ಗ್ರಾಂನಷ್ಟು ಬೆರೆಸಿ ಹತ್ತು ದಿನಗಳ ನಂತರ ಸಿಂಪಡಣೆ ಮಾಡಿದರೆ ರೋಗ ಹತೋಟಿಗೆ ಬಂದು ಉತ್ತಮ ಬೆಳೆ ಬರುವುದು ಎಂದು ಮತ್ತಿಕೊಪ್ಪ ಕಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಾನಂದ ಹಿರೇಮಠ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದ ವಿವಿಧ ರೆತರ ಹೊಲಗಳಿಗೆ ಸೋಮವಾರ ಭೇಟಿ ನೀಡಿ ಹೆಸರು ಕಾಳು ಬೆಳೆಗೆ ತಗುಲುತ್ತಿರುವ ರೋಗ ಪರಿಶೀಲನೆ ನಡೆಸಿ ಮಾತನಾಡಿ, ಬುಡಕೊಳೆ ರೋಗದ ಲಣಗಳೆಂದರೆ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ಶಿಲೀಂಧ್ರ ರೋಗಕ್ಕೆ ತುತ್ತಾಗಿ ಹಾಳಾಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ರೆತರು ಸರಿಯಾದ ನಿರ್ವಹಣಾ ಕ್ರಮ ಅನುಸರಿಸಬೇಕು ಎಂದು ಹೇಳಿದರು.
ಬೆಲಹೊಂಗಲ ಕಷಿ ಅಧಿಕಾರಿ ಯಮನಪ್ಪ ಮಾದಗೇರ, ಪಿಕೆಪಿಎಸ್ ಅಧ್ಯ ನಿಂಗಪ್ಪ ಚೌಡಣ್ಣವರ, ರೆತರಾದ ನಾಗಪ್ಪ ತುಪ್ಪದ, ಮಹಾಂತೇಶ ಚೌಡಣ್ಣವರ, ಪರಪ್ಪ ಚೌಡಣ್ಣವರ ಇದ್ದರು.