ನಾಮಧಾರಿಗೌಡ ಕೇಂದ್ರ ಸಮಿತಿಗೆ ಆಯ್ಕೆ

Published on

ಮೈಸೂರು: ಅಖಿಲ ನಾಮಧಾರಿಗೌಡ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಕೆ.ಟಿ.ಗೋವಿಂದರಾಜು ಹಾಗೂ ಗೌರವ ಕಾರ್ಯದರ್ಶಿಯಾಗಿ ಸಿ.ಎನ್.ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಗಂಗೋತ್ರಿ ಬಡಾವಣೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ನಿರ್ಗಮಿತ ಅಧ್ಯಕ್ಷ ಚನ್ನರೇವಣ್ಣ, ಮಾಜಿ ಅಧ್ಯಕ್ಷರಾದ ಸಿ.ಜಿ.ನಾಗರಾಜ್, ಡಿ.ಸುಂದರ್‌ದಾಸ್, ಮೈಸೂರು ನಗರ ವಲಯದ ಅಧ್ಯಕ್ಷ ಎಂ.ಎನ್.ಸೋಮಶೇಖರ್, ಮಾಜಿ ಅಧ್ಯಕ್ಷರಾದ ಎಂ.ರಾಜಶೇಖರ್, ಎಚ್.ಕೆ.ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net