ನಾಮದೇವರು ಧರ್ಮ ಪ್ರಸಾರ ಮಾಡಿದ ಶ್ರೇಷ್ಠ ಸಂತ

Namdev is a great saint who spread religion.
Published on

ರಬಕವಿ-ಬನಹಟ್ಟಿ : ಸಂತ ನಾಮದೇವ ಮಹಾರಾಜರು ಜೀವನ ಪರ್ಯಂತ ಭಗವಂತನ ನಾಮದ ಪ್ರಸಾರ ಮಾಡಿದರು. ಭಾಗವತ ಧರ್ಮದ ಪತಾಕೆಯನ್ನು ಪಂಜಾಬ್‌ದವರೆಗೆ ಕೊಂಡೊಯ್ಯುವ ಕಾರ್ಯ ಅವರು ಸ್ವತಃ ಮಾಡಿ, ಧರ್ಮ ಪ್ರಸಾರ ಮಾಡಿದ ಶ್ರೇಷ್ಠ ಸಂತರೆಂದು ನಾಮದೇವ ಶಿಂಪಿ ಸಮಾಜದ ಹಿರಿಯರಾದ ಸುರೇಶ ಕೋಪರ್ಡೆ ತಿಳಿಸಿದರು.

ಬನಹಟ್ಟಿಯ ವಿಠ್ಠಲ ಮಂದಿರದಲ್ಲಿ ಮಂಗಳವಾರ ಜರುಗಿದ ಸಂತ ನಾಮದೇವ ಮಹಾರಾಜರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸಂತ ನಾಮದೇವರ ಸುಮಾರು 2500 ಅಭಂಗಗಳ ಅಭಂಗನಾಥ ಪ್ರಸಿದ್ಧವಾಗಿದೆ. ಅವರು ಹಿಂದಿ ಭಾಷೆಯಲ್ಲಿ ಸಹ ಕೆಲವು ಅಭಂಜಗಗಳ ರಚನೆ ಮಾಡಿದ್ದಾರೆಂದರು.

ನಗರದ ಪ್ರಮುಖ ಬೀದಿಗಳಲ್ಲಿ ಸಂತ ನಾಮದೇವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ವಿಜಂಭಣೆಯಿಂದ ಜರುಗಿತು. ಸಮಾಜದ ಮುಖಂಡರಾದ ಕುಮಾರ ಬಕರೆ, ಸುರೇಶ ಕೋಪರ್ಡೆ, ಮಹಾನಿಂಗ ಹಾಸಿಲಕರ, ಮಹಾದೇವಪ್ಪ ಬಕರೆ, ವಿಜಯ ಕೋಪರ್ಡೆ, ಶಂಕರ ಕೋಪರ್ಡೆ, ಮಹಾದೇವ ಭಸ್ಮೆ, ಗಂಗಪ್ಪ ಹಾಸಿಲಕರ, ಸಂಜು ಕೋಪರ್ಡೆ, ಬಾಳು ಹಾಸಿಲಕರ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net