ಕಾಳಿಕಾಂಬ ದೇವಿ ಪಲ್ಲಕ್ಕಿ ಉತ್ಸವ

NMT PALLAKKI 27
Published on

ನ್ಯಾಮತಿ: ಕರೊನಾ ಕಾರಣಕ್ಕೆ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿ ಪಲ್ಲಕ್ಕಿ ಉತ್ಸವ ಸೋಮವಾರ ಸರಳವಾಗಿ ನಡೆಯಿತು.

ದೇವಾಲಯದಲ್ಲಿ ದಸರಾ ಹಬ್ಬದ ಅಶ್ವಿಜ ಮಾಸದ ಬಹುಳ ಪಾಡ್ಯಮಿಯ ಘಟಸ್ಥಾಪನೆಯೊಂದಿಗೆ ಪ್ರಾರಂಭಗೊಂಡಿದ್ದ ಪೂಜಾ ಕಾರ್ಯಗಳು ಸಪ್ತಮಿ, ದುರ್ಗಾಷ್ಟಮಿ, ಮಹಾನವಮಿ, ವಿಜಯದಶಮಿ ತಿಥಿಯವರೆಗೆ ನೆರವೇರಿದವು.

ದೇವಿ ಉತ್ಸವದ ಅಂಗವಾಗಿ ಗಂಗಾಮಾತೆ, ಗಣಪತಿ , ಈಶ್ವರ , ನವಗ್ರಹ ಶಿಲಾಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನವದುರ್ಗೆಯರ ಗೊಂಬೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಶ್ರೀ ಕಾಳಿಕಾಂಬಾ ದೇವಿ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯಗಳು ಪಾಲ್ಗೊಂಡಿದ್ದವು.

ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಮಿತಿ , ವಿಶ್ವಬ್ರಾಹ್ಮಣ ಯುವ ವೇದಿಕೆ, ಗಾಯತ್ರಿ ಮಹಿಳಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net