ಗಾಂಧೀಜಿ ಗೀತ ನಮನ ಸತ್ಯಂ ಶಿವಂ ಸುಂದರ0

namana
Published on

ಮಡಿಕೇರಿ:

ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಗುರುವಾರ ಸಂಜೆ ಇಲ್ಲಿಯ ಗಾಂಧಿಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಗಾಂಧೀಜಿಯವರಿಗೆ ಗೀತನಮನ ಸಮರ್ಪಿಸಲಾಯಿತು. ಗಾಂದೀಜಿಯವರಿಗೆ ಹಾಡುಗಳ ಮೂಲಕ ಗೌರವ ನಮನ ಸಲ್ಲಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್, ಕೊಡಗು ಜಾನಪದ ಪರಿಷತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ನೇ ವರ್ಷದ ಗಾಂಧೀಜಿ ಗೀತ ನಮನ ಸತ್ಯಂ ಶಿವಂ ಸುಂದರA ಕಾರ್ಯಕ್ರಮ ಅನೇಕ ಕಲಾವಿದರ ಕಲಾ ಪ್ರತಿಭೆ ಬೆಳಕಿಗೆ ತರಲು ಸಹಕಾರಿಯಾಯಿತು.

ಕಾರ್ಯಕ್ರಮವನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ, ಅಂಬೆಕಲ್ ಸುಶೀಲಾ ಕುಶಾಲಪ್ಪ, ಅಲೆಮಾಡ ಚಿತ್ರಾ ನಂಜಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. ನಂತರ ಎರಡೂವರೆ ಗಂಟೆ ಕಾಲ ಅನೇಕ ಗಾಯಕ, ಗಾಯಕಿಯರು ದೇಶಭಕ್ತಿಗೀತೆ, ಭಜನೆ, ಕೀರ್ತನೆಗಳ ಮೂಲಕ ಕೇಳುಗರನ್ನು ಸಮ್ಮೋಹನಗೊಳಿಸಿದರು.

ಶೃತಿ ಲಯ ತಂಡದ ವೀಣಾ ಹೊಳ್ಳ,, ಮಮತಾ ಶಾಸ್ತ್ರೀ, ಗೀತಾ ಸಂಪತ್ ಕುಮಾರ್, ಸುಧಾ ಎಸ್ ಪ್ರಸಾದ್, ತನುಶ್ರೀ, ಆರತಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಕಲಾವಿದ ಜಿ. ಚಿದ್ವಿಲಾಸ್, ಪ್ರತಿಭಾ ಮಧುಕರ್, ಸ್ಕಂದ, ಸಪ್ನಾ ಮಧುಕರ್, ಕೆ.ಜಯಲಕ್ಷ್ಮಿ, ಕಾವ್ಯಶ್ರೀ ಕಪಿಲ್, ಸಂಧ್ಯಾಚಿದ್ವಿಲಾಸ್, ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ, ಜಾನಪದ ಯುವಬಳಗದ ಸಂಚಾಲಕಿ ಗಾಯತ್ರಿ ಚೆರಿಯಮನೆ, ಪ್ರತಿಮಾರೈ, ಚಿತ್ರಾ ಆರ್ಯನ್, ಪ್ರಜ್ಞ ಕಲಾಕೇಂದ್ರದ ಜೀವಿಕಾ, ಮಿನುಗು, ಲಷಿತಾ ರೈ, ಪೂರ್ವಿ, ಸಂಜನಾ, ವರ್ಷ ಬಿ.ಡಿ., ಇಂತರ, ಸಾಂಚಿ, ಮೀನಾಕ್ಷಿ, ರೇಷ್ಮಾ ಸೇರಿದಂತೆ ಅನೇಕರು ವಿಭಿನ್ನವಾದ ಹಾಡುಗಳ ಮೂಲಕ ಮನ ಸೆಳೆದರು.

ಕಾಯಕ್ರಮ ಸಂಘಟಕ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಈ ವೇಳೆ ಮಾತನಾಡಿ, ರಾಷ್ಟçಪಿತ ಮಹಾತ್ಮಗಾಂಧೀಜಿಯವರನ್ನು ಗಾಂಧಿ ಭವನದಲ್ಲಿಯೇ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಇಷ್ಟವಾಗಿದ್ದ ಹಾಡುಗಳ ಮೂಲಕ ವಿಭಿನ್ನ ರೀತಿಯಲ್ಲಿ ಗೀತ ನಮನ ಸಲ್ಲಿಸಲಾಗುತ್ತಿದೆ. ಜತೆಗೆ ಮಡಿಕೇರಿಯಲ್ಲಿರುವ ಹಾಡುಗಾರರ ಸಮ್ಮಿಲನವೂ ಈ ಕಾರ್ಯಕ್ರಮದ ಮೂಲಕ ಆಗಿದೆ ಎಂದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾಧಿಕಾರಿ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಎ.ಕೆ. ನವೀನ್, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಖಜಾಂಜಿ ಎಸ್.ಎಸ್. ಸಂಪತ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net