ಗುಂಡ್ಲುಪೇಟೆಯಲ್ಲೂ ತ್ರಿನೇತ್ರನ ನಾಮಸ್ಮರಣೆ

26-FEB-GPT-2-
ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದ ರಸ್ತೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ವಿಶೇಷ ಅಲಂಕಾರ ದೊಂದಿಗೆ ಪೂಜೆ ನೆರವೇರಿಸಲಾಯಿತು.
Published on

ಗುಂಡ್ಲುಪೇಟೆ: ತಾಲೂಕಿನ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ತಾಲೂಕಿನ ಪುಣ್ಯಕ್ಷೇತ್ರಗಳಾದ ತ್ರಿಯಂಭಕಪುರದ ತ್ರಿಯಂಭಕೇಶ್ವರ ದೇವಾಲಯ, ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಬ ದೇವಾಲಯ, ತೆರಕಣಾಂಬಿಯ ಶ್ರೀಮೂಲಸ್ಥಾನೇಶ್ವರ ದೇವಾಲಯ ಹಾಗೂ ಪಟ್ಟಣದ ರಾಮೇಶ್ವರ ದೇವಾಲಯಗಳಲ್ಲಿ ಭಕ್ತರು ಇಡೀ ರಾತ್ರಿ ದೇವರ ದರ್ಶನ ಪಡೆದರು.

ದಾನಿಗಳ ನೆರವಿನಿಂದ ಮಿನಿ ದಸರೆ ಮಾದರಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಶಿವಲಿಂಗಕ್ಕೆ ಕುಳಿತಿರುವ ಭಂಗಿಯಲ್ಲಿ ಅಲಂಕಾರ ಮಾಡಲಾಗಿತ್ತು.

ರಾತ್ರಿಯಿಡೀ ಜಾಗರಣೆ ನಡೆಸುವ ಸಲುವಾಗಿ ಸಂಜೆ 6ರಿಂದ 11 ಗಂಟೆವರೆಗೆ ಅಂಧಮಕ್ಕಳಿಂದ ದೇವರ ನಾಮಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, 11ರಿಂದ 2 ಗಂಟೆವರೆಗೆ ಮೈಸೂರು ಆಕಾಶವಾಣಿ ಕಲಾವಿದರಾದ ವಿದುಷಿ ಮಹಾಲಕ್ಷ್ಮೀ, ತಬಲ ವಾದಕ ಇಂದುಶೇಖರ್ ಅವರ ತಂಡದವರಿಂದ ಹರಿದಾಸ ಸಾಹಿತ್ಯ, ದಾಸವಾಣಿ, ಭಕ್ತಿಗೀತೆ ಗಾಯನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net