ನಾಮದೇವ ಸಮಾಜದಿಂದ ದಸರಾ ಉತ್ಸವ

IMG_20241012_205710_129.jpg
Published on

ಹುಬ್ಬಳ್ಳಿ: ಇಲ್ಲಿಯ ನಾಮದೇವ ದೈವಕಿ ಸಮಾಜದ ಆಶ್ರಯದಲ್ಲಿ ಸಖಿ ಮಂಡಳ, ಮಹಿಳಾ ಮಂಡಳ, ಮಿತ್ರ ಮಂಡಳ ವತಿಯಿಂದ ದಸರಾ ಉತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.

ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪಮೇಯರ್ ದುರ್ಗಮ್ಮ ಬಿಜವಾಡ, ಶಶಿಕಾಂತ ಬಿಜವಾಡ, ಡಾ. ಅಮಿತ ಖಟಾವಕರ, ಬಾಬುರಾವ ಜಾಧವ, ತುಷಾರ, ನೇತಾಜಿ ಕವಳೇಕರ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾಜದ ಅಧ್ಯಕ್ಷ ಪ್ರಶಾಂತ ಲಾಳಗೆ, ಅಧ್ಯಕ್ಷತೆ ವಹಿಸಿದ್ದ ನಾಮದೇವ ಕ್ರೆಡಿಟ್ ಸೊಸೈಟಿ ಚೇರ್ಮನ್ ನಾಮದೇವ ಮುಸಳೆ ಮಾತನಾಡಿದರು.

ಪಂಚರಾದ ನಿತೀನ್ ಬುಲಬುಲೆ, ರಾಜು ವಾಳ್ವೇಕರ, ಅಜಯ ಗೋಂದಕರ, ಸಂಜಯ ಸದರೆ, ರಾಜೇಶ ವಂಡಕರ, ವಿನಾಯಕ ರಾಶಿನಕರ, ಸಖಿ ಮಂಡಳದ ಅಧ್ಯಕ್ಷೆ ಪ್ರಾಚಿ ಲಾಳಗೆ, ಮಹಿಳಾ ಮಂಡಳದ ರೋಹಿಣಿ ವೆಲ್ಲಾಳ, ಮಿತ್ರ ಮಂಡಳದ ವಿಶಾಲ ಮುಸಳೆ, ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net