ನಮ್ಮ ಹಾಡು ನಮ್ಮ ಗಾನಯಾನ ಜೂ. ೧೫, ೧೬ಕ್ಕೆ

pressmeet
ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿದರು.
Published on

ಚಿಕ್ಕಮಗಳೂರು: ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಜೂ. ೧೫ ಮತ್ತು ೧೬ರಂದು ಎರಡು ದಿನಗಳ ಕಾಲ ನಮ್ಮ ಹಾಡು ನಮ್ಮ ಗಾನಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಇದು ಗಾನಯಾನದ ೧೦೦ನೇ ಸಂಚಿಕೆಯಾಗಿದೆ. ಸಮಾರಂಭದಲ್ಲಿ ಭಾವಗೀತೆ, ಚಲನಚಿತ್ರ ಗೀತೆಗಳನ್ನು ಪ್ರಸಿದ್ಧ ಗಾಯಕರು ಹಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಖ್ಯಾತ ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಹಾಗೂ ಗಾಯಕಿ ಸುರೇಖಾ ಹೆಗಡೆ ಅವರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಗಾನಯಾನಕ್ಕೆ ಸೇಂಟ್ ಮೇರಿಸ್ ಶಾಲೆ, ಕೆನರಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗಮ ಸಂಗೀತಾ ಗಂಗಾ ಮತ್ತು ಪರಿಷತ್ ಹಾಗೂ ಲಯನ್ಸ್ ಸಂಸ್ಥೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಜೂನ್ ೧೫ರ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ನೆರವೇರಿಸಲಿದ್ದಾರೆ. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಕೀಬೋರ್ಡ್ ವಾದಕ ಎನ್.ಆರ್.ಕೃಷ್ಣ ಉಡುಪ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಜೂನ್ ೧೬ ರಂದು ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್, ಮುಖ್ಯ ಅತಿಥಿಗಳಾಗಿ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ, ಎ.ಬಿ.ಸುದರ್ಶನ್, ಸಿ.ಕೆ.ಸುಬ್ಬರಾಯ, ಎಂ.ಆರ್.ದೇವರಾಜ ಶೆಟ್ಟಿ, ಜೆರಾಲ್ಡ್ ಲೋಬೋ, ಎಚ್.ಎಂ.ನಾಗರಾಜ್ ರಾವ್ ಕಲ್ಕಟ್ಟೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗಾಯಕ ಎಂ.ಎಸ್.ಸುಧೀರ್ ಮಾತನಾಡಿ, ಗಾನಯಾನ ಸಮಾರಂಭದಲ್ಲಿ ಖ್ಯಾತ ಗಾಯಕರಾದ ಸುರೇಖಾ ಹೆಗಡೆ, ರಮ್ಯ ಪ್ರಸನ್ನ, ಮಾಲಿನಿ ಕೇಶವಪ್ರಸಾದ್, ಶೃತಿ ಮಹೇಶ್, ಚೇತನ್ ರಾಮ್, ಸುರೇಂದ್ರ ನಾಯ್ಕ್, ರಾಮನಾಯ್ಕ್ ಮತ್ತಿತರರು ಸುಮಧುರ ಕಂಠದಿAದ ಗಾಯನ ನಡೆಸಿಕೊಡಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಲಾವಿದರಾದ ರಾಯನಾಯ್ಕ್, ಉಮಾಪ್ರಸಾದ್, ರೂಪಾನಾಯ್ಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net