

ಮಂಡ್ಯ: ಪ್ರಜೆಗಳಿಗಾಗಿ ದುಡಿದು ದೇವರೆನಿಸಿಕೊಂಡು ಮಹಾನ್ ವ್ಯಕ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂದಿಗೂ ಪ್ರಸ್ತುತ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀರಾಮ ಮಂದಿರದ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಸಾನ್ನಿಧ್ಯ ವಹಿಸಿ ವಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ನಾಲ್ವಡಿ ಅವರ ಬಗ್ಗೆ ತಿಳಿಸುವ ಕೆಲಸ ಆಗಬೇಕು. ಅವರ ಆಡಳಿತ ಹಾಗೂ ನಡೆದು ಬಂದ ದಾರಿಯು ನಮಗೆಲ್ಲ ದಾರಿದೀಪ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಲ್ವಡಿ ಅವರ ಚಿಂತನೆಗಳಿರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸ್ಪರ್ಧೆ ನಡೆಸುವುದು ಸೇರಿದಂತೆ ಸಾಧನೆ ತಿಳಿಸುವ ಕೆಲಸ ವಾಡಿದರೆ, ಮಕ್ಕಳಲ್ಲಿ ಸೇವಾ ಮನೋಭಾವ ಬೇರೂರುತ್ತದೆ ಎಂದು ಹೇಳಿದರು.
ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ತಹಸೀಲ್ದಾರ್ ಕುಂಞ ಅಹಮದ್, ಆಲಕೆರೆ ಶಿವರಾಮ್, ತಗ್ಗಹಳ್ಳಿ ವೆಂಕಟೇಶ್, ಮಂಜು, ಲೋಕೇಶ್ ಮಲ್ಲಿಗೆರೆ, ವಾರಸಿಂಗನಹಳ್ಳಿ ಪ್ರತಾಪ್ ಟಿ.ಹುರುಗಲವಾಡಿ ರಾಮಯ್ಯ, ಶಕುಂತಲಾ ಇತರರಿದ್ದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್.ಸಂದೇಶ್, ಎಸ್.ಸಿ.ಮಧುಚಂದನ್, ಇಂಡುವಾಳು ಚಂದ್ರಶೇಖರ್, ಕಾರಸವಾಡಿ ಸುರೇಶ, ಲಂಕೇಶ್ ಮಂಗಲ, ಮಂಜುಳಾ ಆಲದಹಳ್ಳಿ, ದೇವಮ್ಮ ಜವರೇಗೌಡ ಅವರನ್ನು ಸನ್ಮಾನಿಸಲಾಯಿತು.