ನೆನಪಿಸಿಕೊಳ್ಳುವ ಆಡಳಿತ ಕೊಟ್ಟ ನಾಲ್ವಡಿ: ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಜಯರಾಂ ಬಣ್ಣನೆ

02_11_Mdy_03(Nalvadi)
Published on

ಮಂಡ್ಯ: ನಾಲ್ವಡಿ ಕೃಷ್ಣ್ಣರಾಜ ಒಡೆಯರ್ ಅವರು ಜನರು ಸದಾ ನೆನಪಿಸಿಕೊಳ್ಳುವಂತಹ ಆಡಳಿತ ಕೊಟ್ಟಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಜಯರಾಂ ರಾಯಪುರ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಾಲ್ವಡಿ ನೆನಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಘ-ಸಂಸ್ಥೆಗಳನ್ನು ಹುಟ್ಟುಹಾಕಿದರು. ಆರೋಗ್ಯ, ಶಿಕ್ಷಣ, ಕೃಷಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ನಡೆಸಿದ ಪೂರ್ವ ಸಿದ್ಧತೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.

ಭಾರತೀ ಕಾಲೇಜಿನ ಪ್ರಾಂಶುಪಾಲ ಮಾ.ರಾಮಕೃಷ್ಣ ವಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಸವಾನತೆಯ ತತ್ವ ಸಾರಿದ ಮಹನೀಯರು. ಬ್ರಿಟಿಷರ ಸಮನಾಗಿ ಅವರ ಎದುರು ಕುರ್ಚಿಗಳನ್ನು ಹಾಕಿ ಪ್ರಜೆಗಳನ್ನು ಕುಳ್ಳಿರಿಸುವುದರ ಮೂಲಕ ಸವಾನತೆ ಸಾರಿದ್ದರು ಎಂದು ತಿಳಿಸಿದರು.

ಕುಲಪತಿ ಡಾ.ಪುಟ್ಟರಾಜು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಶಕುಂತಲಾ, ಪ್ರಾಂಶುಪಾಲ ರವಿ, ಮಂಗಲ ಲಂಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net