ಪ್ರತಿದಿನವೂ ನಾಲ್ವಡಿ ಸ್ಮರಣೆ ಮಾಡಲಿ: ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

Nalvadi Krishnaraja Wodeyar Smarane Mandya
Published on

ಮಂಡ್ಯ: ನಗರದ ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ನಾಲ್ವಡಿ ಅವರ ಪುಣ್ಯಸ್ಮರಣಿ ಕಾರ್ಯಕ್ರಮ ನಡೆಯಿತು.

ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ನಾಲ್ವಡಿ ಅವರು ಮಂಡ್ಯ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಹಾಗೂ ಅಭಿವೃದ್ಧಿ ಕೆಲಸವನ್ನು ಯಾರೊಬ್ಬರೂ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ಜನರು ಪ್ರತಿದಿನವೂ ನಾಲ್ವಡಿ ಅವರನ್ನು ಸ್ಮರಿಸಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಜಿಲ್ಲೆಯ ಜನರಿಗೆ ನಾಲ್ವಡಿ ಜೀವನ ಕೊಟ್ಟವರು. ಅವರ ಆಡಳಿತಾವಧಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಬೇಕಾದರೆ ಹಣದ ಸಮಸ್ಯೆ ಎದುರಾದಾಗ ಅವರ ತಾಯಿ ಮತ್ತು ಮಡದಿಯ ಚಿನ್ನಾಭರಣ ಮಾರಾಟ ಮಾಡಿ ಡ್ಯಾಂ ಪೂರ್ಣ ಮಾಡಿದರು ಎಂದರು.

ವಿವಿಧ ಸಂಘಟನೆಯ ಬೇಲೂರು ಸೋಮಶೇಖರ್, ಬೋರ್‌ವೆಲ್ ನಾರಾಯಣ್, ಅಪ್ಪಾಜಪ್ಪ, ಸಾತನೂರು ಜಯರಾಂ, ಚಂದಗಾಲು ಲೋಕೇಶ್, ಶಕುಂತಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net