ಸುವರ್ಣಯುಗ ನಿರ್ಮಾಣ ಮಾಡಿದ ನಾಲ್ವಡಿ: ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಹೇಳಿಕೆ

Nalvadi Krishnaraja Wodeyar Jayanti Mandya
Published on

ಮಂಡ್ಯ: ನಾವು ದಿನನಿತ್ಯ ನೀರು ಕುಡಿಯುವಾಗ, ಊಟ ಮಾಡುವಾಗ ನೆನಪು ಮಾಡಿಕೊಳ್ಳಬೇಕಾಗ ನಾಲ್ವಡಿ ಕೃಷ್ಣರಾಜ ಒಡೆಯರ ಅವರನ್ನು ಸ್ಮರಿಸಬೇಕು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಎಂ.ಸಿ.ಲಂಕೇಶ್ ಹೇಳಿದರು.

ನಗರದ ಹೊಸಹಳ್ಳಿಯಲ್ಲಿ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಕಚೇರಿಯಲ್ಲಿ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಅವರ 140ನೇ ಜನ್ಮದಿನಾಚರಣೆ ಹಾಗೂ ಝುನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ, ಶಿಕ್ಷಣ, ನೀರಾವರಿ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟು ನಾಡಿನೆಲ್ಲಡೆ ಕಾರ್ಖಾನೆಗಳನ್ನು ತೆರೆದು ಕೃಷಿ ಹಾಗೂ ನೀರಾವರಿಗೆ ಅಣೆಕಟ್ಟೆ ಕಟ್ಟಿಸಿ ಆರ್ಥಿಕಾಭಿವೃದ್ದಿಗೆ ಬ್ಯಾಂಕುಗಳನ್ನು ಸ್ಥಾಪಿಸಿದರು. ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಗಳನ್ನು ತೆರೆದು, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಧುನಿಕ ಇತಿಹಾಸದಲ್ಲಿ ಸುವರ್ಣಯುಗವನ್ನು ನಿರ್ಮಿಸಿದರು ಎಂದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಕೆಂಪರಾಜು ಮಾತನಾಡಿ, ಒಬ್ಬ ಪುರುಷನ ಹಿಂದೆ ಮಹಿಳೆ ಇರುತ್ತಾರೆ. ಅದೇ ರೀತಿ ನಾಲ್ವಡಿ ಅವರ ಸಾಧನೆ ಹಿಂದೆ ಅವರ ತಾಯಿ ಕೆಂಪನಂಜಮ್ಮಣಿ ಹಾಗೂ ಪತ್ನಿ ಇರುವುದನ್ನು ಕಾಣಬಹುದು ಎಂದರು.

ಮಂಡಳಿ ಅಧ್ಯಕ್ಷ ವಿಜಯ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಮಮತಾ, ಉಷಾ, ಅರುಣ ಕೆಂಪರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net