ಜನಪರ ಯೋಜನೆ ಜಾರಿಗೊಳಿಸಿದ ನಾಲ್ವಡಿ: ಕರವೇ ಜಿಲ್ಲಾಧ್ಯಕ್ಷ ಶಂಕರೇಗೌಡ ಹೇಳಿಕೆ

1 (5)
Published on

ಮಂಡ್ಯ: ಮೈಷುಗರ್ ಕಾರ್ಖಾನೆ, ಕನ್ನಂಬಾಡಿ ಕಟ್ಟೆ ನಿರ್ಮಾಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷವೂ ಕೂಡ ಇಂತಹ ಮಹನೀಯರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕರವೇ(ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಶಂಕರೇಗೌಡ ಹೇಳಿದರು.

ನಗರದ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕರವೇಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜರ್ಷಿ ನಾಲ್ವಡಿ ಅವರ ಹೆಸರು ಚಿರಸ್ಥಾಯಿ. ತಮ್ಮ ಆಡಳಿತದಲ್ಲಿ ದೂರದೃಷ್ಟಿಯುಳ್ಳ ಆಡಳಿತವನ್ನಿಟ್ಟುಕೊಂಡಿದ್ದ ಮಹನೀಯರೆನಿಸಿದ್ದರು. ಬಡವರ ಹಾಗೂ ದೀನದಲಿತರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ ಅವರ ಸೇವೆ ಅನನ್ಯ ಎಂದು ಬಣ್ಣಿಸಿದರು.

ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ ಮಾತನಾಡಿ, ಜನಸಾಮಾನ್ಯರ ನೋವನ್ನು ಅರಿತಿದ್ದ ನಾಲ್ವಡಿ ಕೊಡುಗೆ ಮಂಡ್ಯ ಜಿಲ್ಲೆಗೆ ವಿಶೇಷವಾಗಿದೆ. ಅವರ ಕೊಡುಗೆಗಳು ನಾಡಿಗೆ ಅಭಿವೃದ್ಧಿ ಪರ್ವವೇ ಸರಿ ಎನ್ನಬಹುದು. ವಿದ್ಯುತ್‌ಚ್ಛಕ್ತಿ ಉತ್ಪಾದನೆಯಲ್ಲಿ ಶಿಂಷಾ ನದಿಯಿಂದ ಮಾಡಿದ ಸಾಧನೆ ಅವಿಸ್ಮರಣೀಯ. ಹಾಗೆಯೇ ಕಾರ್ಖಾನೆಗಳು ಹಾಗೂ ರೈತರ ಜನಪಯೋಗಿ ಕೆಲಸಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ವಿವರಿಸಿದರು.

ಮುಖಂಡರಾದ ಬೋರೇಗೌಡ, ಅಶೋಕ್, ಸತೀಶ್, ಪ್ರಭು, ಎಚ್.ಎ.ರಫಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net