ಮನೆ ಬಳಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳ ಅಟ್ಯಾಕ್: ಪಾಲಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Nallur stray dog attack children
Published on

ಚನ್ನಗಿರಿ: ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಂಗಳವಾರ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಮೂವರು ಮಕ್ಕಳು ಗಾಯಗೊಂಡಿದ್ದಾರೆ.

ವಜೀರ್ ಖಾನ್, ಮಲ್ಲಿಕ್ ಹಾಗೂ ಶಯಜಾದ್ ಗಾಯಾಳು ಮಕ್ಕಳು. ಗ್ರಾಮದ ಬಿಲಾಲ್ ನಗರದ ಬೀದಿಯಲ್ಲಿ ಬೆಳಗ್ಗೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಹತ್ತಕ್ಕೂ ಹೆಚ್ಚಿನ ನಾಯಿಗಳ ಗುಂಪು ದಿಢೀರ್ ಎರಗಿದೆ. ಶ್ವಾನಗಳು ಬೊಗಳು ಶಬ್ದ ಕೇಳಿ ಹೊರ ಬಂದ ಕುಟುಂಬದವರನ್ನು ನಾಯಿಗಳನ್ನು ಓಡಿಸಿದ್ದು, ಅನಾಹುತ ತಪ್ಪಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಲಾಗಿದೆ.

ಶ್ವಾನಗಳ ಉಪಟಳಕ್ಕೆ ಜನ ಹೈರಾಣ: ಎರಡು ವರ್ಷಗಳಿಂದ ಗ್ರಾಮದಲ್ಲಿ ನಾಯಿಗಳ ಕಾಟ ಅಧಿಕವಾಗಿದೆ. ಸಾರ್ವಜನಿಕರು ಹಗಲಿನಲ್ಲಿ ಓಡಾಡಲು ಸಹ ಹೆದರುತ್ತಿದ್ದಾರೆ. ಗ್ರಾಪಂ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net