

ಚನ್ನಗಿರಿ: ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವನ್ನು ಸರ್ಕಾರ ಜನಗಣತಿ ವರದಿಯಲ್ಲಿ 7 ಲಕ್ಷ ಎಂದು ತೋರಿಸಿರುವುದು ಅವೈಜ್ಞಾನಿಕವಾಗಿದೆ. ಸಮೀಕ್ಷೆಯಲ್ಲಿ ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡಿ ವರದಿ ನೀಡಬೇಕು ಎಂದು ಉಪ್ಪಾರ ಸಮಾಜದ ಮುಖಂಡ ನಲ್ಲೂರು ಕಟ್ಟೆಮನೆ ಗೌಡ್ರು ತಿಳಿಸಿದರು.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಭಾನುವಾರ ಉಪ್ಪಾರ ಸಮಾಜದ ವತಿಯಿಂದ ಏರ್ಪಡಿಸಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪ್ಪಾರ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಕುಲಕಸುಬು ಮರೆಯದೆ ಅದರಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಸರಿಯಾದ ಸಂಘಟನೆ ಇಲ್ಲದಿರುವುದರಿಂದ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ರಾಜ್ಯದಲ್ಲಿ ಜನಗಣತಿ ಪ್ರಾರಂಭವಾಗಿದ್ದು, ಸಮಾಜದವರು ಮನೆಯಲ್ಲಿದ್ದು ಗಣತಿದಾರರಿಗೆ ಮಾಹಿತಿಯನ್ನು ಸರಿಯಾಗಿ ನೀಡಬೇಕು ಎಂದರು.
ಸಂಘದ ಅಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಮಧುಬಂಡಾರಿ, ಖಜಾಂಚಿ ಜಿ. ಬಸವರಾಜ್, ಗ್ರಾಪಂ ಸದಸ್ಯ ಭಾಗಜ್ಜಿ ಮಂಜಪ್ಪ, ದಿನೇಶ್ ಪೂಜಾರ್, ಬಂಕ್ ಮಧು, ಡಿ.ಜಿ. ಸುನೀಲ್, ವಿರೂಪಾಕ್ಷಪ್ಪ, ಹನುಮಂತ, ಸಜ್ಜಿನ ಇದ್ದರು.