

ಹನೂರು: ಕರ್ನಾಟಕ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್‌ರೋಡ್ ಚೆಕ್‌ಪೋಸ್ಟ್‌ಗೆ ಶಾಸಕ ಆರ್.ನರೇಂದ್ರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದು ಮಾತನಾಡಿ ಅವರು, ಈ ಭಾಗದಿಂದ ತಮಿಳುನಾಡಿಗೆ ಕೂಲಿಗಾಗಿ ತೆರಳಿದ್ದ ಕೆಲವರು ತಮ್ಮ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಹೊರ ರಾಜ್ಯದಿಂದ ಯಾರು ನುಸುಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅನುಮತಿ ಪಡೆದ ವಾಹನವನ್ನು ಹೊರತುಪಡಿಸಿ, ಯಾವುದೇ ವಾಹನ ಪ್ರವೇಶಿಸದಂತೆ ನಿಗಾ ವಹಿಸಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ಸೂಚಿಸಿದರು.
ಸೇತುವೆ ಕಾಮಗಾರಿ ಪರಿಶೀಲನೆ: ಇದೇ ವೇಳೆ ನಾಲ್‌ರೋಡ್ ಬಳಿ 4 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಆರ್.ನರೇಂದ್ರ ಪರಿಶೀಲಿಸಿದರು.
ಕಾಮಗಾರಿಯು ಗುಣಮಟ್ಟದಿಂದ ಕೂಡಿರುವಂತೆ ಹಾಗೂ ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಜಿಪಂ ಸದಸ್ಯ ಬಸವರಾಜು, ಮುಖಂಡರಾದ ಪ್ರಕಾಶ್, ರಾಜು ಇನ್ನಿತರರಿದ್ದರು.