ಶನಿವಾರ ನಾಲ್ಕೂರಮ್ಮ ದೇವಿ ಕೆಂಡೋತ್ಸವ

8ald-3a
Published on

ಆಲ್ದೂರು: ಇತಿಹಾಸ ಪ್ರಸಿದ್ಧ ಆವತಿ ಗ್ರಾಮದ ನಾಲ್ಕೂರಮ್ಮನ ಸುಗ್ಗಿ ಹಬ್ಬಕ್ಕೆ ಕಳೆದ ಶುಕ್ರವಾರ ವಿಧ್ಯುಕ್ತವಾಗಿ ಚಾಲನೆ ದೊರೆತ್ತಿದ್ದು, ಶನಿವಾರ ಕೆಂಡೋತ್ಸವ ದೊರೆಯಲಿದೆ. ಕಾರಣಾಂತರಗಳಿಂದ ಕಳೆದ 8 ವರ್ಷಗಳಿಂದ ನಿಂತು ಹೋಗಿದ್ದ ಸುಗ್ಗಿ ಹಬ್ಬಕ್ಕೆ ಮರು ಚಾಲನೆ ದೊರೆತಿರುವುದರಿಂದ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಭಾನುವಾರ ಹಗಲು ಹಬ್ಬ ನಡೆಯಲಿದ್ದು, ನರಿಗುಡ್ಡೆ ಗ್ರಾಮದಲ್ಲಿ ಸೋಮವಾರ ಉದ್ದಂಡರಾಯನ ಜಾತ್ರೆ ಜರುಗಲಿದೆ. ದಾನಿಹಳ್ಳಿ, ಆವತಿ, ನರಿಗುಡ್ಡೆ, ಹಾರ್ಜಿಹಳ್ಳಿ, ಹೊಸಳ್ಳಿ, ಕುಂಬಾರಹಳ್ಳಿ, ಉತ್ತುಗನಹಳ್ಳಿಗಳ ನಿವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಶ್ರೀಧರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net