

ಕಲಬುರಗಿ: ಬಿಸಿಲುನಾಡು ಕಲಬುರಗಿ ಜಿಲ್ಲೆಯಲ್ಲಿ ವರ್ಷ ವರ್ಷ ಬಿಸಿಲ ಬೇಗೆ ಹೆಚ್ಚುತ್ತಿದ್ದು, ತಾಪಮಾನ ತೀವ್ರವಾಗುತ್ತಿದೆ. ಪರಿಸರ ರಸಲು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಕಳೆದ ಐದು ವರ್ಷದಿಂದ ಸಸಿ ನೆಡುತ್ತಿದೆ ಎಂದು ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಸರ್ಕಾರಿ ಬಾಲಕರ ಬಾಲ ಮಂದಿರದ ಆವರಣದಲ್ಲಿ ಗುರುವಾರ ಸಸಿ ನೆಟ್ಟು ಮಾತನಾಡಿ, ಎಲ್ಲರೂ ಪರಿಸರ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕೋರಿದರು.
ಐದು ವರ್ಷದಿಂದ ಸಸಿ ನೆಡುವ ಕೈಂಕರ್ಯ: ನಾಲ್ಕು ಚಕ್ರ ತಂಡದಿಂದ ಐದು ವರ್ಷದಿಂದ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸಸಿ ನೆಡುವ, ವಿತರಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಖರೀದಿಸಿ ಶಾಲೆ, ಕಾಲೇಜು ಆವರಣಗಳಲ್ಲಿ, ಉದ್ಯಾನ, ಸರ್ಕಾರಿ ಕಚೇರಿಗಳಲ್ಲಿ ನೆಡಲಾಗುತ್ತಿದೆ. ಪರಿಸರಾಸಕ್ತರಿಗೆ ಉಚಿತ ಸಸಿ ವಿತರಿಸಲಾಗುತ್ತಿದೆ. ಜತೆಗೆ ಪ್ಲಾಸ್ಟಿಕ್ ಬ್ಯಾನ್ ಜಾಗೃತಿ ಮಾಡಲಾಗುತ್ತಿದೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಸಸಿ ನೆಡಲಾಗಿದೆ. ನಗರ ಸ್ವಚ್ಛ ಮಾಡಲಾಗಿದೆ. ಮನೆಗೊಂದು ಸಸಿ ಲಕ್ಷ ಸಸಿ ನೆಡುವ ಉದ್ದೇಶವಿದೆ ಎಂದು ಮಾಲಾಕಣ್ಣಿ ತಿಳಿಸಿದರು.
ಹಸಿರ ಕಾರ್ಯಕ್ಕೆ ನಾಲ್ಕು ಚಕ್ರ ತಂಡದ ಕಲ್ಯಾಣರಾವ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಸದಸ್ಯರಾದ ವಿಜಯಲಕ್ಷಿ$್ಮ ಹಿರೇಮಠ, ಜಯಶ್ರೀ ಜೈನ್, ಸಂಗೀತಾ ಕೊರಳ್ಳಿ, ಪೂರ್ಣಿಮಾ ಹೊಸಳ್ಳಿಕರ್, ವೈಶಾಲಿ ನಾಟಿಕಾರ್, ಶೀಲಾ ಕಲಬುರಗಿ, ರಾಹುಲ್ ರಾಠೋಡ, ಆನಂದತೀರ್ಥ ಜೋಶಿ, ಲಿಂಗರಾಜ ಡಾಂಗೆ, ಸುಭಾಷ ಮೇತ್ರೆ, ನಾಗರಾಜ ಡಾಂಗೆ, ವಿನೋದ್ ಕುಲಕರ್ಣಿ, ಅನಿಲ್ ಬಿದನೂರ ಇತರರು ಸಾಥ್ ನೀಡಿದ್ದಾರೆ ಎಂದರು.
ಟ್ರಸ್ಟ್ ಸದಸ್ಯರಾದ ವಿಶಾಲ ಅಭಿಶೇಕ್, ಲಿಂಗರಾಜ್ ಡಾಂಗೆ, ಅನಿಲ್ ಬಿದನೂರ್, ಪ್ರಭಾರ ಅಧೀಕ್ಷಕ ಅಬ್ದುಲ್ ಖಯುಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಂಬುಜಾ ಎಂ.ಡಿ., ವಿಠಲ ಭಕರೆ, ವಾಹಿದಾ ಬೇಗಂ, ಸಿದ್ದರಾಮ ಬಿರಾದಾರ, ಸತೀಶ ಜಾಕಿರ್, ಶಿವಾನಂದ ಕಣ್ಣಿ, ಗೌಡಪ್ಪ, ಸಿದ್ದು ಡಿ ಹುನ್ನಳ್ಳಿ, ಅಮರ, ಭೀಮರಾವ ಭಜಂತ್ರಿ, ರಾಜೇಂದ್ರ, ಶೋಭಾ, ಲಕ್ಷಿ$್ಮ ಇತರರಿದ್ದರು.