

ಮೈಸೂರು: ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌ನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಜಿ. ನಳಿನಿ ಅವಿರೋಧವಾಗಿ ಆಯ್ಕೆಯಾದರು.
ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಹೊಸಹುಂಡಿ ರಘು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ನಳಿನಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಳಿನಿ ಆಯ್ಕೆ ಘೋಷಿಸಲಾಯಿತು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸರ್ವೇಶ್ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಜಯಲಕ್ಷ್ಮಿಕಾರ್ಯನಿರ್ವಹಿಸಿದರು.
ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಇಂಧುಧರ್, ರಾಜ್ಯ ತೋಟಗಾರಿಕಾ ಮಹಾಮಂಡಲದ ನಿರ್ದೇಶಕ ಸೂರ್ಯಕುಮಾರ್, ಮಾಜಿ ಅಧ್ಯಕ್ಷ ಬಿ.ಪಿ. ಬೋರೇಗೌಡ, ನಿರ್ದೇಶಕರಾದ ಪದ್ಮನಾಭ, ಚಂದ್ರೇಗೌಡ, ಶ್ರೀನಿವಾಸ್ ಕುಂಬ್ರಳ್ಳಿ ಮಠ, ಮಹಾದೇವ, ಮಹೇಂದ್ರ, ರಾಮೇಗೌಡ ಇತರರು ಇದ್ದರು.