

ನಾಲತವಾಡ: ಕನ್ನಡ ನಾಡಿಗೆ ಅಪಮಾನ ಮಾಡಿದ ಶಿವಸೇನೆ ಹಾಗೂ ಎಂಇಎಸ್ ಪುಂಡರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಹಾಗೂ ವಿವಿಧ ಪ್ರಗತಿಪರ ಸಂಘಟನೆ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಕಚೇರಿಯ ಗ್ರಾಮ ಸಹಾಯಕ ಗಂಗಾಧರ ಜೂಲಗುಡ್ಡ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಂಗನಗೌಡರ ಮಾತನಾಡಿ, ಕೂಡಲೇ ಸರ್ಕಾರ ಎಂಇಎಸ್ ಸಂಘಟನೆ ನಿಷೇಧಿಸಿ ಅದರ ಮುಖಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ಮೌನೇಶ ಮಾದರ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಮಲ್ಲು ತಳವಾರ, ಗೌಸಮಹ್ಮದ್ ಸಿಕ್ಕಲಗಾರ, ವೀರೇಶ ಇಲಕಲ್ಲ ಮಾತನಾಡಿದರು.
ಮುಖಂಡರಾದ ಪೃಥ್ವಿರಾಜ, ಎ.ಜಿ. ಗಂಗನಗೌಡರ, ಹನುಮಂತ ಕುರಿ, ಮೈಬು ಕುಳಗೇರಿ, ಮಂಜುನಾಥ ಕಟ್ಟಿಮನಿ, ವೀರೇಶ ಇಲಕಲ್ಲ, ಮುನ್ನಾ ಡೆರೇದ, ಸಿದ್ದು ಹರಸೂರು, ಅಮರೇಶ ಹಟ್ಟಿ, ಪಾಪಣ್ಣ ಗಾದಿ, ವೀರೇಶ ಕಂದಗಲ್ಲ, ರಫೀಕ್ ತೆಗ್ಗಿನಮನಿ, ಪರಶುರಾಮ ಹಳ್ಳಿ, ಶುಭಾಸ ಕ್ಷತ್ರಿ, ಶಂಕರಣ್ಣ ಟಕ್ಕಳಕಿ ಇತರರಿದ್ದರು.