ನಾಲತವಾಡದಲ್ಲಿ ಶಾಸಕ ಸಿ.ಎಸ್.ನಾಡಗೌಡರ ಹುಟ್ಟುಹಬ್ಬ ಸಂಭ್ರಮ

Nalatwada, MLA C.S. Nadagowda, Ayyanagudi, Birthday, Birthday,
ನಾಲತವಾಡದ ವೀರೇಶ್ವರ ವೃತ್ತದಲ್ಲಿ ಮುಖಂಡರು, ಅಭಿಮಾನಿಗಳು ಶಾಸಕರಿಗೆ ಶುಭಕೋರಿ ಸನ್ಮಾನಿಸಿದರು. ಬಾಪುಸಾಹೇಬ ದೇಶಮುಖ, ಶಂಕರರಾವ ದೇಶಮುಖ, ಪೃಥ್ವಿರಾಜ ನಾಡಗೌಡ, ಗುರುಪ್ರಸಾದ ದೇಶಮುಖ, ಮಹಾಂತೇಶ ಗಂಗನಗೌಡರ ಇತರರಿದ್ದರು.
Published on

ನಾಲತವಾಡ: ಜನ್ಮದಿನ ಪ್ರಯುಕ್ತ ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ- ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ದಂಪತಿ ಶುಕ್ರವಾರ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು, ಶುಕ್ರವಾರ 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನದ ಪ್ರಯುಕ್ತ ಕ್ಷೇತ್ರದಲ್ಲಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಶಾಸಕ ಸಿ.ಎಸ್.ನಾಡಗೌಡ ದಂಪತಿ ಬೆಳಗ್ಗೆ ತಮ್ಮ ಮನೆ ದೇವರಾದ ಅಯ್ಯನಗುಡಿಯ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಅಲ್ಲಿಂದ ನಾಲತವಾಡದ ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಹಾಗೂ ಶರಣ ವೀರೇಶ್ವರ ಮಹಾಮನೆಯಲ್ಲಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಸಕರು, ಕಾಂಗ್ರೆಸ್ ಮುಖಂಡರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ವೀರೇಶ್ವರ ವೃತ್ತದಲ್ಲಿ ಮುಖಂಡರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದ್ದರು.

ಬಾಪುಸಾಹೇಬ ದೇಶಮುಖ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗೊಳಿಸಿದ್ದಾರೆ. ಸದಾ ಜನರ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ. ನಾಲತವಾಡ ಭಾಗದ ಜನರು ನನ್ನ ಮನೆಯವರು ಎಂದು ಸದಾ ಅಕ್ಕರೆ ಹಾಗೂ ಪ್ರೀತಿಯಿಂದ ಕಾಣುತ್ತಾರೆ ಎಂದರು.

ಶಂಕರರಾವ ದೇಶಮುಖ, ಪೃಥ್ವಿರಾಜ ನಾಡಗೌಡ, ಗುರುಪ್ರಸಾದ ದೇಶಮುಖ, ಮಹಾಂತೇಶ ಗಂಗನಗೌಡರ ಮಾತನಾಡಿ, ಶಾಸಕರು ನೂರಾರು ವರ್ಷ ಬಾಳಬೇಕು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡಲು ಶಾಸಕರು ಇನ್ನೂ ಹೆಚ್ಚು ಕಾಲ ರಾಜಕೀಯದಲ್ಲಿ ಇರಬೇಕು ಎಂದರು.

ಪ.ಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಮುಖಂಡರಾದ ಅಮರಪ್ಪ ಗಂಗನಗೌಡರ, ಚಂದ್ರಶೇಖರ ಮೇಟಿ, ಸಿದ್ದಣ್ಣ ಆಲಕೊಪ್ಪರ, ಅಲ್ಲಾಭಕ್ಷ ಮೂಲಿಮನಿ, ಮುತ್ತು ಗೊರಬಾಳ, ಪ.ಪಂ ಸದಸ್ಯರಾದ ಅಂಬ್ರಪ್ಪ ಶೀರಿ, ಬಾಬು ಕ್ಷತ್ರಿ, ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ಗಂಗನಗೌಡರ, ದಾವಲಸಾಬ ಸುಲ್ತಾನಪುರ, ಮಹ್ಮದ ನಾಡದಾಳ, ಕಮಲಾ ಭಜಂತ್ರಿ ಸೇರಿ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ನನ್ನ ಹುಟ್ಟುಹಬ್ಬದ ದಿನದಂದು ಮುಖಂಡರು, ಅನೇಕ ರಾಜಕಾರಣಿಗಳು, ಅಭಿಮಾನಿಗಳ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅವರ ಪ್ರೀತಿ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.
ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net