ನಾಲತವಾಡ ಬಸ್ ನಿಲ್ದಾಣಕ್ಕೆ ವೀರೇಶ್ವರರ ನಾಮಕರಣ ಆಗಲಿ

Nalatwada, Bus Stand, Veereshwar, Congress leader, C.B.Aski,
ನಾಲತವಾಡದಲ್ಲಿ ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡ ಅವರನ್ನು ಅಸ್ಕಿ ಫೌಂಡೇಷನ್‌ದಿಂದ ಸನ್ಮಾನಿಸಲಾಯಿತು. ಸಿ.ಬಿ.ಅಸ್ಕಿ, ಭೀಮಣ್ಣ ಗುರಿಕಾರ, ಪೃತ್ವಿರಾಜ ನಾಡಗೌಡ, ಗುರುಪ್ರಸಾದ ದೇಶಮುಖ ಇತರರಿದ್ದರು.
Published on

ನಾಲತವಾಡ: ಪಟ್ಟಣದ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಶರಣ ವೀರೇಶ್ವರರ ನಾಮಕರಣ ಮಾಡಬೇಕು. ಈ ಕುರಿತು ಶಾಸಕ ಸಿ.ಎಸ್.ನಾಡಗೌಡ ಅವರು ಸಾರಿಗೆ ಸಚಿವರಾದ ರಾಮಲಿಂಗಾರಡ್ಡಿ ಅವರಿಂದ ಆದೇಶ ಮಾಡಿಸಬೇಕು ಎಂದು ಸಮಾಜ ಸೇವಕ- ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.

ಇಲ್ಲಿಯ ಮಾಜಿ ಸಚಿವ ದೇಶಮುಖ ಅವರ ನಿವಾಸದಲ್ಲಿ ಅಸ್ಕಿ ಫೌಂಡೇಷನ್ ಸಹಯೋಗದಡಿ ಸ್ಥಳಿಯ ಪಪಂ ನೂತನ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡ ಹಾಗೂ ಮುದ್ದೇಬಿಹಾಳ ಪುರಸಭೆಯ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಅವರ ಸನ್ಮಾನ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ರಾಜ್ಯದಲ್ಲೇ ಕಾಯಕಯೋಗಿ ಶರಣ ವೀರೇಶ್ವರರ ಹೆಸರು ಅಜರಾಮರವಾಗಿದೆ. ಈ ನಿಟ್ಟಿನಲ್ಲಿ ನನ್ನ ಹಾಗೂ ಈ ಭಾಗದ ಜನತೆಯ ಆಸೆಯಂತೆ ಶಾಸಕರು ಶೀಘ್ರವೇ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಿಸಬೇಕು ಎಂದು ಮನವಿ ಮಾಡಿದರು.

ಪ.ಪಂ ಮಾಜಿ ಸದಸ್ಯ ಭೀಮಣ್ಣ ಗುರಿಕಾರ ಮಾತನಾಡಿ, ಕಳೆದ 5 ವರ್ಷಗಳ ನಮ್ಮ ಅವಧಿಯಲ್ಲಿ ಅಧ್ಯಕ್ಷರು ಪಾರದರ್ಶಕವಾಗಿ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ನೀಡಿದಂತೆ ಪ್ರಸಕ್ತ ಅವಧಿಯಲ್ಲೂ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದರು.

ಪ.ಪಂ ಮಾಜಿ ಅಧ್ಯಕ್ಷ- ಹಾಲಿ ಸದಸ್ಯ ಪೃತ್ವಿರಾಜ ನಾಡಗೌಡ, ಗುರುಪ್ರಸಾದ ದೇಶಮುಖ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಎಂಎಜಿ ಮಹಾಂತೇಶ ಗಂಗನಗೌಡರ, ಅಮರೇಶ ಗೂಳಿ, ಪ.ಪಂ. ಸದಸ್ಯರಾದ ಸಂಗಣ್ಣ ಬಾರಡ್ಡಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಂಗಮೇಶಗೌಡ ಗಂಗನಗೌಡ, ಸಿದ್ದಣ್ಣ ಕಟ್ಟಿಮನಿ, ಮುತ್ತು ಯರಗೋಡಿ, ಶಿವಶರಣ ಇಲಕಲ್, ಮುತ್ತು ಕ್ಷತ್ರಿ, ವೀರೇಶ ಗಂಗನಗೌಡರ, ಸಂಗಮೇಶ ಜಾವಳಗೇರಿ, ಮಹಾಂತೇಶ ಚಿತ್ರನಾಳ, ಪ್ರಶಾಂತ ಕೆಂಭಾವಿ, ಶರಣಪ್ಪ ಕಾನಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net