ಅಯ್ಯನಗುಡಿ ಸಂಭ್ರಮದ ರಥೋತ್ಸವ

NLT-22-1
Published on

ನಾಲತವಾಡ: ಸಮೀಪದ ಅಯ್ಯನಗುಡಿಯಲ್ಲಿ ಗಂಗಾಧರೇಶ್ವರನ ರಥೋತ್ಸವ ಸೋಮವಾರ ಸಂಜೆ ಸಂಭ್ರಮದಿಂದ ನೆರವೇರಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ರಥಕ್ಕೆ ಕಬ್ಬಿನ ಜಲ್ಲೆ, ಉತ್ತತ್ತಿ, ನಿಂಬೆ, ಬಾಳೆ, ಮಂಗಲಕಾರಿ ವಸ್ತುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

250 ಮೀ. ದೂರವಿರುವ ಗಂಗಪ್ಪಯ್ಯನ ಪಾದಗಟ್ಟಿವರೆಗೆ ತೇರನ್ನು ಎಳೆಯಲಾಯಿತು. ರಥೋತ್ಸವಕ್ಕೂ ಮುನ್ನ ವಾಡಿಕೆಯಂತೆ ಜಾತ್ರೆ ರೂವಾರಿ ಹಾಗೂ ಬಲದಿನ್ನಿಯ ಧಣಿಗಳು ಕುಟುಂಬ ಸಮೇತ ರಥಕ್ಕೆ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಸಿ.ಎಸ್. ನಾಡಗೌಡರ ಸಹೋದರರಾದ ಜಿಪಂ ಮಾಜಿ ಸದಸ್ಯ ಮುನ್ನಾ ಧಣಿ ನಾಡಗೌಡ, ದಾದಾ ಧಣಿ, ಬಾಳಾಸಾಹೇಬ ನಾಡಗೌಡ, ಸೋಮಶೇಖರ ನಾಡಗೌಡ, ಪಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪೃಥ್ವಿರಾಜ ನಾಡಗೌಡ, ಕಾಂಗ್ರೆಸ್ ಯುವ ಧುರೀಣ ಚಿನ್ನು ನಾಡಗೌಡ, ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net