ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಬಚಾವ್

NLT 14-1
Published on

ನಾಲತವಾಡ: ಚಲಿಸುತ್ತಿದ್ದ ಸರ್ಕಾರಿ ಬಸ್ ಹಿಂಬದಿ ಟಯರ್ ವಾಲ್ವ್ ಕಟ್ ಆಗಿ ಚಕ್ರದಿಂದ ಟಯರ್ ಬಿಚ್ಚಿಕೊಂಡು ಉರುಳಿದ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವಾಗಿದ್ದಾರೆ

ಮುದ್ದೇಬಿಹಾಳದಿಂದ ನಾಲತವಾಡ ಪಟ್ಟಣಕ್ಕೆ ಬುಧವಾರ ಬೆಳಗ್ಗೆ ಆಗಮಿಸುತ್ತಿದ್ದ ಬಸ್‌ನ ಟಯರ್ ಪಟ್ಟಣದ ಕೆಇಬಿ ಎದುರು ಬಿಚ್ಚಿಕೊಂಡು ಹೊರಗೆ ಬಂದಿದೆ. ಟರ್ ಉರುಳುವುದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಬಸ್ ಚಾಲಕ ಬಸವರಾಜ ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 7 ಜನರು ಪ್ರಯಾಣಿಸುತ್ತಿದ್ದರು. ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net