

ನಾಲತವಾಡ: ಇಲ್ಲಿಂದ ಹುಬ್ಬಳ್ಳಿಗೆ ಇಳಕಲ್ಲ ಘಟಕದ ಬಸ್ ಸೇವೆಗೆ ಚಾಲನೆ ನೀಡಲಾಯಿತು.
ಬೆಳಗ್ಗೆ 5.45ಕ್ಕೆ ಹೊರಟು 6.15ಕ್ಕೆ ಮುದ್ದೇಬಿಹಾಳ ತಲುಪುವುದು. ಅಲ್ಲಿಂದ ಇಳಕಲ್ಲ, ಗದಗ, ಗಜೇಂದ್ರಗಡ ಮಾರ್ಗವಾಗಿ ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿ ತಲುಪಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8 ಗಂಟೆಗೆ ನಾಲತವಾಡ ತಲುಪಿ ವಾಸ್ತವ್ಯ ಹೂಡಲಿದೆ.
ನಿವೃತ್ತ ಸಾರಿಗೆ ನೌಕರ ಮುತ್ತಣ್ಣ ಸ್ಥಾವರಮಠ, ಸುರೇಶ ದಡ್ಡಿ, ಸಾರಿಗೆ ನಿಯಂತ್ರಕ ಆದಪ್ಪ ಗಂಗನಗೌಡ್ರ, ಶಂಕ್ರಣ್ಣ ಜಾಲವಾದಿ, ಶರಣಪ್ಪ ಗಂಗನಗೌಡ್ರ, ಅಶೋಕ, ಚನ್ನಪ್ಪಗೌಡ ಹಂಪನಗೌಡ ಇತರರಿದ್ದರು.
ಒತ್ತಾಯ: ಮುದ್ದೇಬಿಹಾಳದಿಂದ ರಾತ್ರಿ 9.30ರ ನಂತರ ನಾಲತವಾಡಕ್ಕೆ ಬಸ್ ಸೇವೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ವೇಳೆ ಪಟ್ಟಣಕ್ಕೆ ಆಗಮಿಸಲು ಬಸ್ ಇಲ್ಲ. ಈ ಕುರಿತು ಮುದ್ದೇಬಿಹಾಳ, ರಾಯಚೂರು ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ, ರಾತ್ರಿ ಮುದ್ದೇಬಿಹಾಳದಿಂದ ನಾಲತವಾಡ ಮಾರ್ಗವಾಗಿ ರಾಯಚೂರು ಅಥವಾ ಮಂತ್ರಾಲಯಕ್ಕೆ ಬಸ್ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.