ನಳಂದಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ

IMG_20250327_205109_226.jpg
Published on

ಹುಬ್ಬಳ್ಳಿ: ದಾವಣಗೆರೆಯ ಜಿ.ಎಂ. ಯುನಿವರ್ಸಿಟಿಯಲ್ಲಿ ಏರ್ಪಡಿಸಿದ್ದ ಟೆಕ್ನೋವೇಶನ್ 2025 ಸ್ಪರ್ಧೆಯಲ್ಲಿ ನಗರದ ನಳಂದಾ ಫೌಂಡೇಷನ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ರೋಹಿತ್ ಪೂಜಾರಿ ಇಂಜಿನಿಯರಿಂಗ್ ಕ್ವಿಜ್ ನಲ್ಲಿ ಪ್ರಥಮ, ಸಮರ್ಥ ಬೆಟಗೇರಿ ಟ್ರೇಸರ್ ಹಂಟ್ ನಲ್ಲಿ ಪ್ರಥಮ ಹಾಗೂ ಸಿದ್ಧಾರ್ಥ ಸಂಕಣ್ಣವರ ಇಂಜಿನಿಯರಿಂಗ್ ಕ್ವಿಜ್ ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಸದಾನಂದ ನಭಾಪುರ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ನಳಂದಾ ಫೌಂಡೇಷನ್ ಆಡಳಿತ ಮಂಡಳಿ, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net