ವಿದ್ಯಾರ್ಥಿ ಜೀವನಕ್ಕೆ ಗುರುವಿನ ಪಾತ್ರ ಅಗತ್ ಯ: ಪ್ರಣವ್ ಕೆ.ಭಟ್ ಅಭಿಮತ

Published on

ಪೆರ್ಲ: ವಿದ್ಯಾರ್ಥಿ ಜೀವನದಲ್ಲಿ ಗುರು ಪ್ರಧಾನ ಪಾತ್ರ ನಿರ್ವಹಿಸುತ್ತಾನೆ. ಗುರುವಿನ ಮಾರ್ಗದರ್ಶನ ವಿದ್ಯಾರ್ಥಿ ಜೀವನದ ದಾರಿದೀಪವಾಗುವುದು ಎಂದು ಮಲಪ್ಪುರಂ ಮುಂಡುಪರಂಬ ರೀಜನಲ್ ಸೈನ್ಸ್ ಅಂಡ್ ಹ್ಯುಮಾನಿಟೀಸ್ ಕಾಲೇಜು ಇಂಗ್ಲಿಷ್ ವಿಭಾಗ ಮುಖ್ಯಸ್ಥ, ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕ ಪ್ರಣವ್ ಕೆ.ಭಟ್ ಹೇಳಿದರು.

ಅವರು ನಾಲಂದ ಕಾಲೇಜು, ನಾಲಂದ ಚಾರಿಟೆಬಲ್ ಟ್ರಸ್ಟ್, ಐಕ್ಯೂಎಸಿ ಆಶ್ರಯದಲ್ಲಿ ‘ತರಂಗ್ 2ಕೆ25’ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ನಾಲಂದ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು.

ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಿಸಿ ಅಭಿನಂದಿಸಲಾಯಿತು. ಇಂಗ್ಲಿಷ್ ವಿಭಾಗ ಉಪನ್ಯಾಸಕಿ, ವಿದ್ಯಾರ್ಥಿ ಕ್ಷೇಮಪಾಲಕಿ ಶಿಲ್ಪಾ ಪಿ.ಸ್ವಾಗತಿಸಿದರು. ಮಲಯಾಳಂ ವಿಭಾಗ ಉಪನ್ಯಾಸಕಿ ವಿನೀಶ ವಂದಿಸಿದರು. ಆಡಳಿತ ವಿಭಾಗ ಮುಖ್ಯಸ್ಥೆ ನಿಶ್ಮಿತಾ ನಿರೂಪಿಸಿದರು. ಕಾಸರಗೋಡು ಸ್ಪಾರ್ಕ್ ಗುಂಪಿನಿಂದ ವಯಲಿನ್ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net